ಮಂಗಳೂರು, ಡಿ 27(SM): ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಯುವಕನ ವಿರುದ್ಧ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಮುಳಿಹಿತ್ಲು ನಿವಾಸಿ ನಿಖಿತ್ ಶೆಟ್ಟಿ ಎಂಬ ಯುವಕನ ವಿರುದ್ಧ ಜೆಪ್ಪು ಮೂಲದ ಯುವತಿಯೊಬ್ಬಳು ಠಾಣೆಗೆ ದೂರು ನೀಡಿದ್ದಾರೆ. ನಿಖಿತ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಪ್ರೀತಿಯ ನಾಟಕವಾಗಿ ದ್ರೋಹ ಎಸಗಿದ್ದ ಎಂದು ಯುವತಿ ದೂರಿದ್ದಾರೆ. ಇನ್ನು ಮದುವೆಗೆ ಯುವತಿಯ ಕುಟುಂಬಸ್ಥರು ತಯಾರಿ ನಡೆಸಿದ್ದರು.
ಅಲ್ಲದೆ, ಸಾವಿರಾರು ರೂಪಾಯಿಗಳನ್ನು ವ್ಯಯಿಸಿದ್ದರು. ಆದರೆ ಈ ನಡುವೆ ಯುವಕ ವಿದೇಶಕ್ಕೆ ಪರಾರಿಯಾಗಿದ್ದು, ಯುವತಿ ಕುಟುಂಬಸ್ಥರು ಠಾಣೆಯ ಮೆಟ್ಟಿಲೇರಿದ್ದಾರೆ.
ಯುವಕನನ್ನು ನಂಬಿ ಮೋಸ ಹೋಗಿರುವ ಯುವತಿ ಪಾಂಡೇಶ್ವರ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.