ಉಡುಪಿ, ಏ 12 (DaijiworldNNews/HR): ಸಚಿವ ಕೆ. ಎಸ್ ಈಶ್ವರಪ್ಪ ವಿರುದ್ಧ ಡೆತ್ ನೋಟ್ ಬರೆದು ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಸಂತೋಷ್ ಪಾಟೀಲ್ ಅವರ ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್.ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಂತೋಷ ಪಾಟೀಲ್ ಜೊತೆಗೆ ಇಬ್ಬರು ಇದ್ದರು. ಫಾರೆನ್ಸಿಕ್ ಟೀಮ್ ಕೂಡ ಮಂಗಳೂರಿನಿಂದ ಬರುತ್ತಿದೆ. ಸಂಬಂಧಿಕರು ಕೂಡ ಬರುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಉಡುಪಿಯಲ್ಲೇ ನಡೆಯುತ್ತೆ ಎಂದರು.
ಇನ್ನು ಸಂತೋಷ್ ಪಾಟೀಲ್ ಅವರು ಸಂಬಂಧಿಕರಿಗಾಗಿ ಕಾಯುತ್ತಿದ್ದು, ಸಂಭಂಧಿಕರು ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.