ಫೋಟೋ: ದಯಾ ಕುಕ್ಕಾಜೆ
ಮಂಗಳೂರು, ಏ 12 (DaijiworldNews/DB): ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದಲ್ಲಿ ಕಡೆ ಚೆಂಡು ಸೋಮವಾರ ನಡೆಯಿತು. ಸಾವಿರಾರು ಮಂದಿ ಭಕ್ತರು ಈ ಸಂಭ್ರಮಕ್ಕೆ ಸಾಕ್ಷಿಯಾದರು.
ಕ್ಷೇತ್ರದಲ್ಲಿ ಕಳೆದೊಂದು ತಿಂಗಳಿನಿಂದ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಸಂಪ್ರದಾಯದಂತೆ ಏಪ್ರಿಲ್ 7ರಂದು ಚೆಂಡು ಆರಂಭಗೊಂಡು ಸೋಮವಾರ ಮುಕ್ತಾಯಗೊಂಡಿತು. ಸಂಜೆ ದೇವರಿಗೆ ವಿಶೇಷ ಪೂಜೆ ಜರಗಿತು. ಬಳಿಕ ವಾಲಗ, ಚೆಂಡೆ, ಕೊಂಬು, ಬ್ಯಾಂಡ್ನೊಂದಿಗೆ ಚೆಂಡಿನ ಗದ್ದೆಗೆ ತಂದು ಚೆಂಡು ಹಾರಿಸಲಾಯಿತು. ಅಮ್ಮುಂಜೆ, ಮಳಲಿ ಗ್ರಾಮಸ್ಥರು ಚೆಂಡಿನ ಆಟದಲ್ಲಿ ಭಾಗವಹಿಸಿದರು. ಹಿರಿ-ಕಿರಿಯರೆನ್ನದೆ ಎಲ್ಲರೂ ಚೆಂಡಾಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಮೊದಲು ಯುವಕ-ಯುವತಿಯರು ಚೆಂಡಾಟದಲ್ಲಿ ಭಾಗವಹಿಸಿದರೆ ಬಳಿಕ ಹಿರಿಯರು ಮತ್ತು ಮಕ್ಕಳು ಕೂಡಾ ಆಡಿ ಖುಷಿ ಪಟ್ಟರು. ಮಂಗಳವಾರ ಮಹಾರಥೋತ್ಸವ ನಡೆಯಲಿದೆ.