ಉಳ್ಳಾಲ, ಏ 12 (DaijiworldNNews/HR): ತಲಪಾಡಿ ಮಾದವಪುರದಿಂದ ಸಾಂತ್ಯಕ್ಕೆ ತೆರಳುವ ತಾತ್ಕಾಲಿಕ ಸೇತುವೆಯಲ್ಲಿ ಕಲ್ಲು ಸಾಗಾಟದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದಿದೆ.
ಈ ಘಟನೆಯಲ್ಲಿ ಲಾರಿ ಚಾಲಕ ಅಲ್ಪಸ್ವಲ್ಪ ಗಾಯಗೊಂಡು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ತಾತ್ಕಾಲಿಕವಾಗಿ ನಿರ್ಮಿಸಿರುವ ಸೇತುವೆಯಲ್ಲಿ ಘನವಾಹನಗಳಿಗೆ ಪ್ರವೇಶವಿಲ್ಲ. ಲಘು ವಾಹನಗಳಷ್ಟೇ ತೆರಳಲು ಸೂಚನಫಲಕ ಹಾಕಲಾಗಿದ್ದರೂ, ಟಿಪ್ಪರ್ ಲಾರಿಗಳು ಲೋಕೋಪಯೋಗಿ ಇಲಾಖೆ ಆದೇಶವನ್ನು ಉಲ್ಲಂಘಿಸಿ ಸೇತುವೆಯಲ್ಲಿ ಚಲಿಸಿ ಅನಾಹುತಕ್ಕೆ ಕಾರಣವಾಗುತ್ತಿದೆ.