ಮಂಗಳೂರು, ಏ 12 (DaijiworldNews/MS): ದನ ಕಳವು ಪ್ರಕರಣದ ಆರೋಪಿಯೋರ್ವನನ್ನು ಬಜಪೆ ಪೊಲೀಸರು ಕೆಂಜಾರು ಮಳವೂರಿನಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಜೋಕಟ್ಟೆ ಪಂಚಾಯತ್ ನ ಗುಡ್ಡೆಹೌಸ್ ನ ಮೊಹಮ್ಮದ್ ರಾಝೀಕ್ ಎಂದು ಗುರುತಿಸಲಾಗಿದೆ.
ಪ್ರಕಾಶ್ ಶೆಟ್ಟಿ ಮರವೂರು ಅವರ ಕಪಿಲ ಪಾರ್ಕ್ ಗೋಶಾಲೆಯಲ್ಲಿ ಮೇಯಲು ಬಿಟ್ಟ ಜಾನುವಾರುಗಳ ಪೈಕಿ ಒಂದು ಹೋರಿ ಮತ್ತು ಕಪಿಲ ತಳಿಯ 2 ಹಸುಗಳನ್ನು ಯಾರೋ ಕಳವು ಮಾಡಿರುವುದಾಗಿ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಜಪೆ ಪೊಲೀಸ್ ತಂಡ ಒಬ್ಬನನ್ನು ಬಂಧಿಸಿದ್ದು ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.