ಬಂಟ್ವಾಳ, ಏ 11 (DaijiworldNews/SM): ವ್ಯಕ್ತಿಯೋರ್ವನ ಶವ ರಾಷ್ಟ್ರಿಯ ಹೆದ್ದಾರಿ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಕೊಡಾಜೆ ಆರಂಗಳ ಸೂಪರ್ ಮಾರ್ಕೆಟ್ ಎದುರುಗಡೆ ಶವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. ಸುಮಾರು 20 ದಿನಗಳ ಹಿಂದೆ ವ್ಯಕ್ತಿ ಮೃತಪಟ್ಟಿರುವುದಾಗಿ ಅಂದಾಜಿಸಲಾಗಿದೆ.
ಸ್ಥಳಕ್ಕೆ ವಿಟ್ಲ ಪೋಲೀಸರು ಬೇಟಿ ನೀಡಿದ್ದಾರೆ.