ಮಂಗಳೂರು, ಏ 11 (DaijiworldNews/SM): ಕಟೀಲು ಮೇಳದ ಪ್ರಧಾನ ಭಾಗವತ ಪ್ರಸಾದ್ ಬಲಿಪ ಅವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಏಪ್ರಿಲ್ ೧೧ರ ಸೋಮವಾರದಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಈ ಬಾರಿಯ ಮೇಳದ ತಿರುಗಾಟದಿಂದ ಬಲಿಪ ಅವರು ದೂರ ಉಳಿದಿದ್ದರು. ಬಲಿಪ ಪ್ರಸಾದ್ ಅವರು ತೆಂಕುತಿಟ್ಟು ಯಕ್ಷಗಾನದ ಬಲಿಪ ಪರಂಪರೆಯ ಬಲಿಪ ನಾರಾಯಣ ಭಾಗವತರ ಪುತ್ರ. ಬಲಿಪ ನಾರಾಯಣ ಭಾಗವತರು ಸಾಕಶ್ಟು ಪ್ರಸಿದ್ಧಿ ಪಡೆದಿದ್ದರು.
ತಂದೆಯಂತೆಯೇ ಪುತ್ರ ಕೂಡ ಯಕ್ಷಗಾನ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅಲ್ಲದೆ, ತನ್ನದೇ ಶೈಲಿಯಿಂದಾಗಿ ಯಕ್ಷ ಪ್ರೇಮಿಗಳಾ ಮನ ಗೆದ್ದಿದ್ದರು. ಕಲೆಯನ್ನು ಮೈಗೂಡಿಸಿಕೊಂಡು ಕಟೀಲು ಎರಡನೆಯ ಮೇಳದ ಪ್ರಧಾನ ಭಾಗವತರಾಗಿದ್ದರು. ತಂದೆಯ ಬಳಿಕ ಬಲಿಪ ಶೈಲಿಯ ಭಾಗವತಿಕೆ ಮೂಲಕ ಪ್ರಸಾದ್ ಮಿಂಚಿದ್ದರು.