ಉಡುಪಿ, ಏ 11 (DaijiworldNews/HR): ನಾವು ಮಾತನಾಡುವುದಿಲ್ಲ ನಮ್ಮ ಆಕ್ಷನ್ ಮಾತನಾಡುತ್ತದೆ. ನಮಗೆ ವಿಪಕ್ಷಗಳಿಂದ ಕಲಿಯಬೇಕಾದ್ದು ಏನೂ ಇಲ್ಲ.ಯಾವ ಸಂದರ್ಭದಲ್ಲಿ ಏನು ನಿರ್ಧಾರ ಏನು ಕ್ರಮ ಕೈಗೊಳ್ಳಬೇಕು ನಮಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಮೌನಿ ನಾಲಗೆ ಕಳೆದುಕೊಂಡಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಹಲವಾರು ಕೊಲೆಗಳಿಗೆ ಸಂಬಂಧಿಸಿದ ಕೇಸು ವಿದ್ ಡ್ರಾ ಮಾಡಿದರು. ಆರೋಪವಿರುವ ಸಂಸ್ಥೆಗಳನ್ನು ಜನಗಳನ್ನು ನೇರವಾಗಿ ಸರ್ಕಾರದ ಮಟ್ಟದಲ್ಲಿ ಕೈಬಿಟ್ಟಿದ್ದಾರೆ. ಹಲವಾರು ಜನರ ಕೇಸುಗಳನ್ನು ಇವರು ಕೈಬಿಟ್ಟಿದ್ದಾರೆ. ಆಗ ನಿಮ್ಮ ಕರ್ತವ್ಯಪ್ರಜ್ಞೆ ಆವಾಗ ಎಲ್ಲಿತ್ತು? ಎಂದು ಪ್ರಶ್ನಿಸಿದ್ದಾರೆ.
ಇನ್ನು ನಿಮ್ಮಿಂದ ಪಾಠ ಕಲಿಯಬೇಕಾದ್ದು ನಾವು ಏನು ಇಲ್ಲ. ನಮ್ಮ ರಾಜ್ಯದ ಶಾಂತಿ-ಸುವ್ಯವಸ್ಥೆ ನಮ್ಮ ರಾಜ್ಯದ ಪ್ರಗತಿ ನಮಗೆ ಗೊತ್ತಿದೆ. ನಾವು ಕೆಲಸ ಮಾಡುತ್ತಿದ್ದೇವೆ ನಾವು ಏನು ಮಾಡಿದ್ದೇವೆ ಅಂತ ತೋರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.