ಕಾರ್ಕಳ, ಏ 10 DaijiworldNews/HR): ಅತ್ತೂರು ಬಳಿ ವಿನ್ಸೆಂಟ್ ನವೀನ್ ಕ್ಯಾಸ್ತಲಿನೋ ಎಂಬವರ ಬಾವಿಯಲ್ಲಿ ಭಾನುವಾರ ಬೆಳಗ್ಗಿನ ಜಾವದಲ್ಲಿ ಚಿರತೆಯೊಂದು ಕಾಣಸಿಕ್ಕಿದೆ.
ಕಾರ್ಕಳ ವಲಯ ಅರಣ್ಯಾಧಿಕಾರಿ ಜಿ.ಡಿ ದಿನೇಶ್ ರವರ ನೇತ್ರತ್ವದಲ್ಲಿ ಕಾರ್ಕಳ ವಲಯದ ಸಿಬ್ಬಂದಿಯವರು ಚಿರತೆಯಿಂದ ಬಾವಿಯಿಂದ ಮೇಲೆತ್ತಿ ರಕ್ಷಿಸಿದ್ದಾರೆ.
ಸುಮಾರು 6 ವರ್ಷ ಪ್ರಾಯದ ಗಂಡು ಚಿರತೆ ಅದಾಗಿತ್ತು. ಆಹಾರ ಹುಡುಕಿಕೊಂಡು ಪರ್ಪಲೆ, ನಿಟ್ಟೆ ಅಥವಾ ಕಾಂತಾವರ ಪರಿಸರದರಿಂದ ಇದೇ ಪರಿಸರಕ್ಕೆ ಅಗಮಿಸಿರಬೇಕು. ಪ್ರಾಣಿತಜ್ಞರು ಸೆರೆ ಹಿಡಿದ ಚಿರತೆಯ ಆರೋಗ್ಯ ತಪಾಸಣೆ ನಡೆಸಿದ್ದಾರೆ. ತದನಂತರ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಚಿರತೆಯನ್ನು ಬಿಡಲಾಗಿದೆ ಎಂದು ಅರಣ್ಯಧಿಕಾರಿ ಯವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಉಪವಲಯ ಅರಣ್ಯಾಧಿಕಾರಿಗಳಾದ ಪ್ರಕಾಶ್ಚಂದ್ರ, ಹುಕ್ರಪ್ಪ ಗೌಡ, ರಾಘವೇಂದ್ರ ಶೆಟ್ಟಿ, ಚಂದ್ರಕಾಂತ್ ಪೋಳ್, ಅರಣ್ಯ ರಕ್ಷಕರಾದ ಎ.ಡಿ ಪೊನ್ನಪ್ಪ, ಭಾಸ್ಕರ, ಶ್ರೀಧರ್ ನರೇಗಲ್, ಪ್ರಕಾಶ್, ಮಹಾಂತೇಶ್ ಎಚ್ ಗೋಡಿ, ಬಾಬು ಪೂಜಾರಿ, ಶಮೀಮ್, ಬಾಬುಪೂಜಾರಿ ಯಾನೆ ಪ್ರಕಾಶ್, ಶ್ರೀಧರ ಪೂಜಾರಿ ಹಾಗೂ ಸ್ಥಳೀಯರಾದ ಮಾಜಿ ಎ.ಪಿ.ಎಂಸಿ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಹಾಗೂ ಇನ್ನಿತರರ ಭಾಗವಹಿಸಿದ್ದಾರೆ.