ಉಡುಪಿ,ಡಿ 27 (MSP): ಉಡುಪಿ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ಮಧ್ವಪೀಠವೇರಿ ಇದೀಗ 80 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಅವರ ಶಿಷ್ಯೆ ಕೇಂದ್ರ ಸಚಿವೆ ಉಮಾಭಾರತಿಯವರು ಇಂದು ಗುರುವಂದನೆ ಸಲ್ಲಿಸಲಿದ್ದಾರೆ.
ಈ ಹಿನ್ನಲೆಯಲ್ಲಿ ಇಂದು ಉಡುಪಿಗೆ ರಾಷ್ಟ್ರಪತಿಗಳು ಆಗಮಿಸಿದ್ದು, ಪೇಜಾವರ ಮಠಕ್ಕೆ ಭೇಟಿ ನೀಡಿ 87 ವರ್ಷದ ಪೇಜಾವರ ಶ್ರೀಗಳನ್ನು ಸನ್ಮಾನಿಸಿದ್ದಾರೆ. ಆ ಬಳಿಕ ಮಾತನಾಡಿದ ರಾಷ್ಟ್ರಪತಿಗಳು "ಈ 88 ರ ಹರೆಯದಲ್ಲೂ ನಿಮ್ಮ ಲವಲವಿಕೆ ,ಉತ್ಸಾಹದ ಜೀವನ ಕಂಡು ನನಗೆ ಅಚ್ಚರಿಯಾಗಿದೆ.ನಿಮ್ಮ ಮಾರ್ಗದರ್ಶನ ದೇಶಕ್ಕೆ ಅಗತ್ಯವಿದೆ, ನಿಮ್ಮ ತಪಸ್ಸು ಸೇವೆ, ಸಾಧನೆಗಳು ಹಾಗೂ 80 ವರ್ಷದ ಯಶಸ್ವಿ ಸನ್ಯಾಸಿ ಬದುಕು ಅಭಿನಂದನೀಯವಾಗಿದೆ. ಈ ಕ್ಷೇತ್ರಕ್ಕೆ ಬಂದು ತಮ್ಮನ್ನು ಕಂಡು ಕೃಷ್ಣನ ದರ್ಶನ ಮಾಡುವ ಯೋಗ ಲಭಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ .ಭಕ್ತಿಯ ಮಾರ್ಗಗಳು ಭಿನ್ನವಿರಬಹುದು ಆದರೆ ಸಂದೇಶ ಸಾರಗಳು ಒಂದೇ ಆಗಿದೆ.ನಾನೂ ಭಗವಂತನ ಭಕ್ತನಾಗಿದ್ದೇನೆ .ನನಗೂ ಶ್ರದ್ಧೆ ಇದೆ.ಆದರೆ ರಾಷ್ಟ್ರಪತಿ ಯ ಸ್ಥಾನದಲ್ಲಿ ಕುಳಿತು ನನಗೆ ಕೆಲವು ನಿರ್ಭಂಧಗಳಿರುವುದರಿಂದ ಅವುಗಳಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಕೋವಿಂದ್ ಹೇಳಿದರು.
ಮಠದ ಮುಂಬವಾಗದಲ್ಲಿ ದಿವಾನ ರಘುರಾಮಾಚಾರ್ಯ ಮಾಲಾರ್ಪಣೆಗೈದು ಸ್ವಾಗತಿಸಿದರು ಶ್ರೀಗಳ ಕಾರ್ಯದರ್ಶ ವಿಷ್ಣುಮೂರ್ತಿ ಆಚಾರ್ಯ ,ಎಸ್ ವಿ ಭಟ್ ಡಿ ಪಿ ಅನಂತ್ ಜೊತೆಗಿದ್ದರು.ಕೇಶವ ಆಚಾರ್ಯ ವಾಸುದೇವ ಭಟ್ ವೇದಘೋಷ ಪೂರ್ಣಕುಂಭ ಹಿಡಿದು ಮಠದ ಒಳಗೆ ಬರಮಾಡಿಕೊಂಡರು.ಶ್ರೀಗಳು ಮಠದ ಪಟ್ಟದ ದೇವರು ರಾಮವಿಠಲ ದೇವರಿಗೆ ಆರತಿ ಬೆಳಗಿದರು.ಶ್ರೀಗಳು ಮಧ್ವಾಚಾರ್ಯರು ಕೃಷ್ಣಮಠದ ಇತಿಹಾಸ ಪೂಜಾ ಪದ್ಧತಿ, ಮಧ್ವರ ಸಂದೇಶಗಳನ್ನು ವಿವರಿಸಿದರು.