ಮಂಗಳೂರು,ಏ 10 DaijiworldNews/HR): ಕ್ರೈಸ್ತ ಬಾಂಧವರು ಏಪ್ರಿಲ್ 10ರಂದು ಭಾನುವಾರ ಧರ್ಮಪ್ರಾಂತ್ಯದಲ್ಲಿ ಪಾಮ್ ಸಂಡೆಯನ್ನು ಆಚರಿಸಿದರು.
ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಏಸುಕ್ರಿಸ್ತರು ಜರುಸಲೇಂ ನಗರ ಪ್ರವೇಶಿಸಿದಾಗ ಅಲ್ಲಿನ ಜನರು ಅದ್ದೂರಿಯಾಗಿ ಸ್ವಾಗತ ಕೋರಿದ ಮತ್ತು ಅಂದಿನಿಂದ ಮರಣದ ತನಕ ಅವರು ಅನುಭವಿಸಿದ ಸಂಕಷ್ಟಗಳ ನೆನಪಿನಲ್ಲಿ ಆಚರಿಸಲಾಗುವ ಗರಿಗಳ ಭಾನುವಾರ (ಪಾಮ್ ಸಂಡೆ) ಯನ್ನು ಜಿಲ್ಲಾದ್ಯಂತ ಆಚರಿಸಿದರು.
ಚರ್ಚ್ಗಳಲ್ಲಿ ತೆಂಗಿನ ಗರಿಗಳನ್ನು ಹಿಡಿದು ಏಸು ಕ್ರಿಸ್ತರಿಗೆ ಘೋಷಣೆ ಹಾಕಿ ಶ್ರದ್ಧಾ ಭಕ್ತಿಯಿಂದ ಬಲಿ ಪೂಜೆ ಅರ್ಪಿಸಿದರು.
ಇನ್ನು ಗುರುವಾರ ಏಸು ಕ್ರಿಸ್ತರ ಕೊನೆಯ ಭೋಜನದ ದಿನ, ಶುಭ ಶುಕ್ರವಾರ ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ, ಶನಿವಾರ ರಾತ್ರಿ ಈಸ್ಟರ್ ಹಬ್ಬದ ಜಾಗರಣೆ ಹಾಗೂ ರವಿವಾರ ಏಸು ಕ್ರಿಸ್ತರ ಪುನರುತ್ಥಾನದ ದಿನದ ಹಬ್ಬವನ್ನು ಆಚರಿಸಲಾಗುತ್ತಿದೆ.