ಬಂಟ್ವಾಳ, ಏ 09 (DaijiworldNews/HR): ಬಂಟ್ವಾಳ ಬ್ಲಾಕ್ ಕಾಂಗ್ರೆಸ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ವಿದ್ಯುತ್, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯು ಎ.9ರ ಶನಿವಾರ ಬಿಸಿರೋಡಿನ ಪ್ಲೈ ಓವರ್ ಕೆಳಗೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಚುನಾವಣೆ ಹತ್ತಿರ ಬಂದ ಸಮಯದಲ್ಲಿ ಧರ್ಮದ ಹೆಸರಿನಲ್ಲಿ ಮೋಸ ಮಾಡುವುದೇ ಬಿಜೆಪಿಯ ಚಾಳಿಯಾಗಿದ್ದು, ಸರಕಾರ ಸ್ವಾಮ್ಯದ ಕಂಪೆನಿಗಳನ್ನು ಮಾರಾಟ ಮಾಡಿದ್ದೇ ಬಿಜೆಪಿಯ ಸಾಧನೆ. ಕಾಂಗ್ರೆಸ್ ಸರಕಾರ ಬಡವರ ಏಳಿಗೆಗಾಗಿ ಇರುವ ಪಕ್ಷವಾದರೆ ಬಿಜೆಪಿ ಕೇವಲ ಓಟಿಗಾಗಿ ಮಾತ್ರ ಇರುವ ಪಕ್ಷವಾಗಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕಡಿಮೆ ಮಾಡಲಾಗಿತ್ತು, ಆದರೆ ಚುನಾವಣೆಯ ಬಳಿಕ ಮತ್ತೆ ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದ್ದು,. ಬೆಲೆ ಏರಿಕೆಯಿಂದ ಜನರ ಬದುಕನ್ನು ತಲ್ಲಣಗೊಂಡಿದೆ ಎಂದಿದ್ದಾರೆ.
ಜನರ ಹಿತವನ್ನು ಕಾಪಾಡುವ ಸರಕಾರ ರಾಜ್ಯದಲ್ಲಿ ಇಲ್ಲ. ರೈತರ ಹೊಟ್ಟೆಗೆ ಹೊಡೆಯುವ ಕೆಲಸ ಬಿಜೆಪಿ ಸರಕಾರದಿಂದ ಆಗಿದೆ. ಕಟ್ಟಡ ಕಾರ್ಮಿಕರ ಸಹಿತ ಬಹುತೇಕ ಎಲ್ಲಾ ವರ್ಗದ ಜನರಿಗೆ ತೊಂದರೆ ಆಗಿದೆ.ನುಡಿದಂತೆ ಮಾಡಲು ಸಾಧ್ಯವಾಗದ ಸರಕಾರ ಮರೆಮಾಚಲು ಅನಗತ್ಯ ವಿಚಾರಗಳ ಮೂಲಕ ಜನರ ಗಮನ ಬೇರೆ ಕಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಪ್ರಮುಖರಾದ ಸುಭಾಶ್ಚಂದ್ರ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಲೋಕೇಶ್ ಸುವರ್ಣ, ಐಡಾ ಸುರೇಶ್, ಜೆಸಿಂತಾ ಡಿಸೋಜ, ಎಂ.ಎಸ್.ಮೊಹಮ್ಮದ್, ಅಬ್ಬಾಸ್ ಅಲಿ, ವೆಂಕಪ್ಪ ಪೂಜಾರಿ, ಮೊಹಮ್ಮದ್ ಶಾಫಿ, ವಾಸು ಪೂಜಾರಿ, ಮಾಯಿಲಪ್ಪ ಸಾಲ್ಯಾನ್, ಸುರೇಶ್ ಪೂಜಾರಿ, ನವಾಜ್ ಶರೀಫ್, ಗಿರೀಶ್ ಪೆರ್ವ, ಜನಾರ್ದನ ಚಂಡ್ತಿಮಾರ್, ಆದಂ ಕುಂಞಿ, ಗಂಗಾಧರ ಪೂಜಾರಿ, ಪದ್ಮನಾಭ ರೈ, ಬಾಲಕೃಷ್ಣ ಆಳ್ವ, ಪದ್ಮಶೇಖರ್ ಜೈನ್, ಲವೀನಾ ವಿಲ್ಮ, ಚಂದ್ರಪ್ರಕಾಶ್ ಶೆಟ್ಟಿ, ಚಂದ್ರಶೇಖರ ಪೂಜಾರಿ, ಲೋಲಾಕ್ಷ ಶೆಟ್ಟಿ ಉಪಸ್ಥಿತರಿದ್ದರು.