ಸುಳ್ಯ, ಏ 09 (DaijiworldNews/HR): ಸರ್ಕಾರಿ ಬಸ್ಗಳಲ್ಲಿ ಬಳಸುತ್ತಿದ್ದ ಡೀಸೆಲ್ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಖಾಸಗಿ ಪೆಟ್ರೋಲ್ ಬಂಕ್ಗಳಿಂದ ತಮ್ಮ ಬಸ್ಗಳಿಗೆ ಡೀಸೆಲ್ ತುಂಬಿಸಲಾರಂಭಿಸಿದೆ.
ಕೆಎಸ್ಆರ್ಟಿಸಿ ಸುಳ್ಯ ಡಿಪೋ ಬಸ್ಗಳು ಖಾಸಗಿ ಪೆಟ್ರೋಲ್ ಬಂಕ್ಗಳಲ್ಲಿ ಡೀಸೆಲ್ ಟ್ಯಾಂಕ್ಗಳನ್ನು ತುಂಬಿಸುತ್ತಿರುವುದು ಗಮನಕ್ಕೆ ಬಂದಿದೆ.
ಕೇಂದ್ರ ಸರ್ಕಾರ ಡೀಸೆಲ್ಗೆ ಸಬ್ಸಿಡಿ ನೀಡುತ್ತಿದ್ದಾಗ ಕೆಎಸ್ಆರ್ಟಿಸಿಗೆ 65 ರಿಂದ 70 ರೂ.ಗೆ ಲೀಟರ್ ಡೀಸೆಲ್ ಸಿಗುತ್ತಿತ್ತು.ಇದೀಗ ರಿಯಾಯಿತಿ ರದ್ದತಿಯಿಂದಾಗಿ ಪ್ರತಿ ಲೀಟರ್ಗೆ 107 ರೂ.ಗೆ ಏರಿಕೆಯಾಗಿದೆ. ಖಾಸಗಿ ಪೆಟ್ರೋಲ್ ಬಂಕ್ ಗಳಲ್ಲಿ ಡೀಸೆಲ್ ಲೀಟರ್ ಗೆ 94 ರೂ. ಹೀಗಾಗಿ ಖಾಸಗಿ ಪೆಟ್ರೋಲ್ ಪಂಪ್ಗಳಿಂದ ಡೀಸೆಲ್ ತುಂಬಿಸಲು ಕೆಎಸ್ಆರ್ಟಿಸಿ ನಿರ್ಧರಿಸಿದೆ.
ಮಂಗಳೂರು ವಿಭಾಗದ ವ್ಯಾಪ್ತಿಗೆ ಬರುವ ಮಂಗಳೂರು, ಕುಂದಾಪುರ ಮತ್ತು ಉಡುಪಿ ಡಿಪೋಗಳ ಮೂರು ಡಿಪೋಗಳಿಗೆ 50,000 ಲೀಟರ್ ಡೀಸೆಲ್ ಅಗತ್ಯವಿದೆ ಎಂದು ಹೇಳಲಾಗಿದೆ. ಸದ್ಯ ಖಾಸಗಿ ಪೆಟ್ರೋಲ್ ಬಂಕ್ಗಳು ಈ ಅಗತ್ಯವನ್ನು ಬಹುತೇಕ ಪೂರೈಸುತ್ತಿವೆ ಎಂದು ಮೂಲಗಳು ತಿಳಿಸಿವೆ.