ಬಂಟ್ವಾಳ, ಏ 09 (DaijiworldNews/HR): ಖಾಸಗಿ ಸಂಸ್ಥೆಯೊಂದರ ಮುಂದೆ ನಿಲ್ಲಿಸಿದ್ದ ಪಿಕಪ್ ಹಾಗೂ ಲಕ್ಷಾಂತರ ಬೆಲೆ ಬಾಳುವ ವಿವಿಧ ಸೊತ್ತುಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡು ಮಂಜೇಶ್ವರ ನಿವಾಸಿಗಳಾದ ಲತೀಶ್ ಜೋಗಿ, ವಿಶ್ವನಾಥ್ ಮತ್ತು ರವಿಕಿರಣ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಸುಮಾರು 3 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಪ್ರಿಲ್ 6 ರಂದು ಮುಂಜಾನೆ ಅಮ್ಟೂರು ಗ್ರಾಮದ ರಾಯಪ್ಪಕೋಡಿಯ ವರ್ಕ್ ಶಾಪ್ ಮುಂಭಾಗ ನಿಲ್ಲಿಸಿದ್ದ ಪಿಕಪ್ ವಾಹನ ಹಾಗೂ ಸಂಸ್ಥೆಯ ವೆಲ್ಡಿಂಗ್ ಮೆಷಿನ್ ಅನ್ನು ಕಳವುಗೈದಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇನ್ನು ದೂರಿನ ಅನ್ವಯ ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಅವರ ನೇತ್ರತ್ವದ ಲ್ಲಿ ಪೋಲೀಸ್ ಉಪನಿರೀಕ್ಷಕ ಅವಿನಾಶ್ ಅಪರಾಧ ವಿಭಾಗದ ಎಸ್.ಐ.ಕಲೈಮಾರ್ ಅವರ ಎರಡು ತಂಡ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.