ಮಂಗಳೂರು, ಏ 08 (DaijiworldNews/SM): ಆಮ್ ಆದ್ಮಿ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಸಂತೋಷ್ ಕಾಮತ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯಾವರು ನಿಯುಕ್ತಿಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿ ದಾಮೋದರನ್, ಮಾಜಿ ಶಾಸಕ ಬಸವರಾಜು, ರಾಜ್ಯ ಸಂಘಟನಾ ಮುಖ್ಯಸ್ಥರಾದ ವಿಜಯ್ ಶರ್ಮ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಹಾಗೂ ದಕ್ಷಿಣ ಕನ್ನಡ, ಉಡುಪಿ ವೀಕ್ಷಕ ಅಶೋಕ ಎಡಮಲೆ ಉಪಸ್ಥಿತರಿದ್ದರು.
ಕರಾವಳಿ ಟೆಕ್ಸ್ ಟೈಲ್ಸ್ ರೆಡಿಮೇಡ್ ಆಂಡ್ ಫೂಟ್ ವೇರ್ ಅಸೋಶಿಯೇಷನ್ ಮಂಗಳೂರು ಇದರ ಅಧ್ಯಕ್ಷರಾಗಿ ಸಂತೋಷ್ ಕಾಮತ್ ವ್ಯಾಪಾರಸ್ಥರ ಪರವಾಗಿ ಹಲವಾರು ಹೋರಾಟಗಳನ್ನು ನಡೆಸಿದ್ದರು. ರಾಜ್ಯ ಸರಕಾರದ ಅಸಮರ್ಪಕ ಲಾಕ್ ಡೌನ್ ನೀತಿಯಿಂದಾಗಿ ಕರಾವಳಿ ಭಾಗದ ವ್ಯಾಪಾರಸ್ಥರಿಗೆ ಹಲವಾರು ತೊಂದರೆಗಳಾಗುತ್ತಿದ್ದ ಸಂದರ್ಭ ಹಾಗೂ ಅವೈಜ್ಞಾನಿಕ ವೀಕೇಂಡ್ ಕರ್ಫೂನಿಂದ ವ್ಯಾಪಾರಸ್ಥರಿಗೆ ಸಮಸ್ಯೆಯಾಗುತ್ತಿದ್ದ ಸಂದರ್ಭದಲ್ಲಿ ಹೋರಾಟ ನಡೆಸಿದ್ದರು.
ಇತ್ತೀಚಿಗೆ ದೆಹಲಿಯಲ್ಲಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ನಡೆದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಕೂಡ ಅವರು ಭಾಗವಹಿಸಿದ್ದರು.