ಮಂಗಳೂರು, ಏ 08 (DaijiworldNews/HR): ಸೈಂಟ್ ಜೋಸೆಫ್ ದ ವರ್ಕರ್ ಹಿರಿಯ ಪ್ರಾಥಮಿಕ ಶಾಲೆ ವಾಮಂಜೂರು 7 ದಿನಗಳ ಸ್ಕೌಟ್ಸ್ ಗೈಡ್ಸ್ ಬೇಸಿಗೆ ಶಿಬಿರವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾ ಸಂಚಾಲಕ ವಂ. ಫಾ. ಜೇಮ್ಸ್ ಡಿಸೋಜ, ಮಕ್ಕಳು ಸ್ಕೌಟ್- ಗೈಡ್ ಚಟುವಟಿಕೆಗಳಲ್ಲಿ ಭಾಗವಹಿಸಿ ಕಲಿಕೆ-ಮೌಲ್ಯ- ಕೌಶಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನದ ಉತ್ತಮ ಧ್ಯೇಯವನ್ನು ಸಾಧಿಸಲು ಶಿಸ್ತಿನಿಂದ ಸೌಹಾರ್ದಯುತವಾಗಿ ಬೆಳೆದು ಸಂತೋಷದ ಸಮೃದ್ಧಿ ಭವಿಷ್ಯ ರೂಪಿಸುವಂತೆ ಕರೆಯಿತ್ತರು. ಸ್ಕೌಟ್- ಗೈಡ್ ಸಂಘಟನೆ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ರೂಪಿಸಲು ಸಹಕಾರಿಯಾಗಿದೆ ಎಂದರು.
ಈ ಏಳು ದಿನಗಳಲ್ಲಿ ರಾಜ್ಯ ಹಾಗೂ ಜಿಲ್ಲಾ ಸಂಸ್ಥೆಯ ನಿರ್ದೇಶನದಂತೆ ಕಲಿಕಾಂಶಗಳು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ವಿವಿಧ ಕಲಿಕಾ ಕೌಶಲ್ಯ ಚಟುವಟಿಕೆಗಳಲ್ಲಿ ತಮ್ಮನ್ನು
ತೊಡಗಿಸಿಕೊಂಡು. ಕೊರೊನಾ ನಿಮಿತ್ತ ಉಂಟಾದ ಕಲಿಕಾ ನಷ್ಟವನ್ನು ಸರಿತೂಗಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯನ್ನು ನಿರ್ಮಿಸಿಕೊಡಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯೋಜಕರು ದೀಕ್ಷಿತ್ ಅಚ್ರಪಾಡಿ ವಿವಿಧ ಕಲೆಗಳು ಮತ್ತು ಕಸದಿಂದ ರಸ ವಿಷಯಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಸ್ಕೌಟ್ಸ್ ಗೈಡ್ಸ್ ಪಠ್ಯಕ್ರಮದ ಕ್ಲಿಷ್ಟ ವಿಷಯಗಳನ್ನು ಬೋಧಿಸಲು ಜಿಲ್ಲಾ ಸಂಸ್ಥೆಯ ಗೈಡ್ ಲೀಡರ್ ಟ್ರೈನರ್ ಶ್ರೀಮತಿ ಸುಫಲಾ ಬಿ. ಇವರು ಸಂಪನ್ಮೂಲ ವ್ಯಕ್ತಿಯಾಗಿ, ಶಾಲಾ ಹಳೆ ವಿದ್ಯಾರ್ಥಿ ಸೀನಿಯರ್ ಗೈಡ್ ಕುಮಾರಿ ಪ್ರಿನ್ಸಿಯಾ ಡಿಸೋಜ ರವರೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
ಕಬ್ - ಬುಲ್ ಬುಲ್, ಗೈಡ್ಸ್ ಮಕ್ಕಳ ಜೊತೆಗೆ ಶಾಲೆಯ ಉಳಿದ ಇತರ ಎಲ್ಲಾ ವಿದ್ಯಾರ್ಥಿಗಳೂ ಈ ಬೇಸಿಗೆ ಶಿಬಿರದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಯಿತು. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಶಿಬಿರದ ಸಮಾರೋಪವನ್ನು ಮಾಡಲಾಯಿತು. ಹೀಗೆ ಇಡೀ ಶಾಲಾ ಮಕ್ಕಳು ಈ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರು ವಂ. ಫಾ. ಜೇಮ್ಸ್ ಡಿಸೋಜ, ಅತಿಥಿಗಳಾಗಿ ತಿರುವೈಲ್ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪುಷ್ಪಾವತಿ, ಗುರುಪುರ ಸ್ಥಳೀಯ ಸಂಸ್ಥೆ
ಅಧ್ಯಕ್ಷರು ರೋಶನ್ ಮಿನೇಜಸ ಕಾಮತ್, ತುಳುನಾಡ ಲಯನ್ಸ್ ಸೋಶಿಯಲ್ ಆಕ್ಟಿವಿಟಿಸ್ ಚೇರ್ಮೆನ್ ಶ್ರೀ ರೊನಾಲ್ಡ್ ಪಿಂಟೊ, ಶಾಲಾಭಿವೃದ್ಧಿ ಮಂಡಳಿ ಸದಸ್ಯೆ ಶ್ರೀಮತಿ ಶಲ್ಮ ಜ್ಯೂಲಿಯೆಟ್
ಡಿಸೋಜ , ಎಸ್. ಡಿ. ಎಮ್. ಸಿ. ಉಪಾಧ್ಯಕ್ಷೆ ಶ್ರೀಮತಿ ಸುನಿತ ನೊರೊನ್ಹಾ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕ್ವೀನಿ ಆನ್ನಿ ಫೆರ್ನಾಂಡಿಸ್ ಈ ಶಿಬಿರದ ನೇತೃತ್ವ ವಹಿಸಿ, ಸೂತ್ರಧಾರರಾಗಿ ಸಕಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಶಾಲಾಭಿಮಾನಿಗಳು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಶಿಬಿರದ ಎಲ್ಲಾ ದಿನಗಳಲ್ಲೂ ಸಿಹಿತಿಂಡಿ ವಿತರಿಸಲು ಸಹಕರಿಸಿದರು. ಎಲ್ಲಾ ಶಿಬಿರಾರ್ಥಿಗಳು ಸಂತೋಷದಿಂದ ಪಾಲ್ಗೊಂಡರು. ಗೈಡ್ ಕ್ಯಾಪ್ಟನ್ ಸಿಸ್ಟರ್ ಫಿಲೋಮಿನಾ, ಫ್ಲಾಕ್ ಲೀಡರ್ ಶ್ರೀಮತಿ ಅಸುಂಪ್ತ ಡಿಸೋಜ ಮತ್ತು ಕಬ್ ಕ್ಯಾಪ್ಟನ್ ಶ್ರೀಮತಿ ಜಾನೆಟ್ ಲೋಬೊ ಬೇಸಿಗೆ ಶಿಬಿರವನ್ನು ಉತ್ತಮವಾಗಿ ಸಂಘಟಿಸಿದ್ದರು.