ಕಾಸರಗೋಡು,ಡಿ 27 (MSP): ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಥಮ ಆರೋಪಿಗೆ 25ವರ್ಷ ಸಜೆ, 1.25 ಲಕ್ಷ ರೂ. ದಂಡ , ಎರಡನೇ ಆರೋಪಿಗೆ 25 ವರ್ಷ ಸಜೆ ಮತ್ತು ಒಂದು ಲಕ್ಷ ರೂ.ದಂಡ ವಿಧಿಸಿ ಕಾಸರಗೋಡು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಫು ನೀಡಿದೆ.ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸ ಕಾನೂನು ಜಾರಿಗೆ ಬಂದ ಬಳಿಕ ಕೇರಳದಲ್ಲಿ ಘೋಷಿಸಿದ ಮೊದಲ ಶಿಕ್ಷೆಯಾಗಿದೆ. ಆಟೋ ಚಾಲಕ ಬದಿಯಡ್ಕ ಬಾರಡ್ಕದ ಎ.ಇಬ್ರಾಹಿಂ ಖಲೀಲ್( 30) , ಸ್ನೇಹಿತ ಬೀಜಂತಡ್ಕದ ಬಿ.ಎ ಖಲೀಲ್ (30)ಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
2013ರ ಜುಲೈ 15 ರಂದು ಘಟನೆ ನಡೆದಿತ್ತು. ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದ 16 ವರ್ಷದ ಬಾಲಕಿಯನ್ನು ಆಟೋದಲ್ಲಿ ಅಪಹರಿಸಿದ್ದ ಇಬ್ಬರು ಜನವಾಸವಿಲ್ಲದ ಮನೆಗೆ ಕೊಂಡೊಯ್ದು ಅತ್ಯಾಚಾರ ನಡೆಸಿರುವುದಾಗಿ ಪ್ರಕರಣ ದಾಖಲಿಸಲಾಗಿತ್ತು. ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಶಾಲೆಗೆ ಬಿಡುವು ಬಿಡುವುದಾಗಿ ನಂಬಿಸಿ ಬೀಜಂತಡ್ಕ ಎಂಬಲ್ಲಿನ ನಿರ್ಜನ ಮನೆ ಗೆ ಕೊಂಡೊಯ್ದು ಇಬ್ಬರು ಅತ್ಯಾಚಾರ ನಡೆಸಿದ್ದರು . ಪ್ರಕರಣದಲ್ಲಿ 23 ಸಾಕ್ಷಿಗಳನ್ನು ವಿಸ್ತರಿಸಲಾಗಿತ್ತು. ಅಪಹರಣಕ್ಕೆ ಸಂಬಂಧಪಟ್ಟಂತೆ ಐದು ವರ್ಷ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ 20 ವರ್ಷ ಸಜೆ ನೀಡಲಾಗಿದೆ. ದಂಡ ಮೊತ್ತವನ್ನು ಬಾಲಕಿಗೆ ನೀಡಲು ನ್ಯಾಯಾಲಯ ತೀರ್ಫು ನೀಡಿತು.
ಇದಲ್ಲದೆ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸಿನಂತೆ ಸರಕಾರದಿಂದ ಸಹಾಯ ಒದಗಿಸುವಂತೆ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ಕಾಸರಗೋಡು ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ಸಿ .ಕೆ ಸುನಿಲ್ ಕುಮಾರ್ , ಪ್ರೇಮ್ ಸದನ್ ಪ್ರಕರಣದ ತನಿಖೆ ನಡೆಸಿದ್ದು , ಸರ್ಕಲ್ ಇನ್ಸ್ ಪೆಕ್ಟರ್ ಡಾ . ಬಾಲಕೃಷ್ಣನ್ ಆರೋಪ ಪಟ್ಟಿ ಸಲ್ಲಿಸಿದ್ದರು.