ಕಾಸರಗೋಡು, ಏ.06 (DaijiworldNews/SM): ಬೆಲೆ ಏರಿಕೆ ನಿಯಂತ್ರಣ, ಕಾಳಸಂತೆಗೆ ಕಡಿವಾಣ ತಡೆಗೆ ಮಂಜೇಶ್ವರ ತಾಲೂಕಿನ ಉಪ್ಪಳ ಪೇಟೆಯಲ್ಲಿ ಜಿಲ್ಲಾ ಆಹಾರ ಪೂರೈಕೆ ಇಲಾಖಾಧಿಕಾರಿಗಳು ತಪಾಸಣೆ ನಡೆಸಿದ್ದು, ಅಂಗಡಿಗಳಲ್ಲಿ ಬೆಲೆ ಪಟ್ಟಿ ಪ್ರದರ್ಶಿಸ ದಿರುವುದು ಪತ್ತೆ ಹಚ್ಚಿದ್ದಾರೆ.
24ಕ್ಕೂ ಅಧಿಕ ಅಂಗಡಿಗಳ ತಪಾಸಣೆ ನಡೆಸಲಾಗಿದೆ. ಕೆಲವು ಅಂಗಡಿಗಳ ಪರವಾನಿಗೆ ನವೀಕರಿಸದಿರುವುದು ಕಂಡು ಬಂದಿದೆ. ಬೆಲೆ ಪಟ್ಟಿಯನ್ನು ಎಲ್ಲಾ ಅಂಗಡಿಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳು ಆದೇಶ ನೀಡಿದರು.
ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿ ಕೆ. ಪಿ ಅನಿಲ್ ಕುಮಾರ್, ತಾಲೂಕು ಅಧಿಕಾರಿ ಸಜಿ ಮೋನ್, ಕೆ.ಎನ್ ಬಿಂದು, ಕೆ.ಪಿ ಬಾಬು, ಪಿ.ವಿ. ಶ್ರೀನಿವಾಸನ್, ಕೆ.ಕೆ. ರಾಜೀವನ್, ಕೆ. ಪಿ ಬಾಬು, ದಾಕ್ಷಾಯಿಣಿ, ಟಿ. ರಾಧಾ ಕೃಷ್ಣನ್, ಸತೀಶನ್, ಶಾಜು ಮೊದಲಾದವರು ನೇತೃತ್ವ ನೀಡಿದರು.