ಮಲ್ಪೆ, ಏ 07 (DaijiworldNews/MS): ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್'ಗೆ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳ ಪೈಕಿ ಮೂವರು ನೀರುಪಾಲಾದ ಘಟನೆ ಮೇ. 7ರ ಗುರುವಾರ ನಡೆದಿದೆ. ನೀರುಪಾಲಾದ ವಿದ್ಯಾರ್ಥಿಗಳ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮುಳುಗಡೆಯಾದ ಮತ್ತೋರ್ವ ವಿದ್ಯಾರ್ಥಿಗಾಗಿ ಶೋಧ ಮುಂದುವರಿದಿದೆ.
ಮಲ್ಪೆ ಸೈಂಟ್ ಮೇರಿಸ್ ದ್ವೀಪ
ಮೃತರನ್ನು ಅಲೆನ್ ರೇಜಿ(22), ಅಮಲ್ ಸಿ ಅನಿಲ್ (22) ಎಂದು ಗುರುತಿಸಲಾಗಿದ್ದು, ಅಂಟೋನಿ ಶೆಣೈ (21)ಗಾಗಿ ಶೋಧ ಮುಂದುವರಿದಿದೆ.
ಕೇರಳದ ಕೊಟ್ಟಾಯಂನ ಮಂಗಳ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ತಂಡದಲ್ಲಿ 42 ವಿದ್ಯಾರ್ಥಿಗಳು ಹಾಗೂ ಇಬ್ಬರು ಉಪನ್ಯಾಸಕರಿದ್ದರು. ದ್ವೀಪ ಪ್ರದೇಶದ ಅಪಾಯಕಾರಿ ಸಮುದ್ರ ಭಾಗದಲ್ಲಿ ವಿದ್ಯಾರ್ಥಿಗಳು ನೀರಿಗಿಳಿದಿದ್ದು, ಈ ವೇಳೆ ಆಕಸ್ಮಿಕವಾಗಿ ಮುಳುಗಡೆಯಾಗಿದ್ದಾರೆಂದು ತಿಳಿದುಬಂದಿದೆ.