ಮಂಗಳೂರು, ಏ. 06 (DaijiworldNews/SM): ರಾಜ್ಯದಲ್ಲಿ ಆಝಾನ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್ ಮಹಮ್ಮದ್ ಮಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ಆಝಾನ್ ಸರ್ಕಾರದ ಮಾರ್ಗಸೂಚಿಯಂತೆ ಪಾಲನೆ ಆಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶ ಮೀರಿ ಧ್ವನಿ ವರ್ಧಕ ಬಳಕೆ ಆಗ್ತಾ ಇದ್ದರೆ ತೋರಿಸಲಿ. ಅಝಾದ್ ನಿಂದ ಮಾಲಿನ್ಯ ಆಗ್ತದೆ ಎಂದಾದ್ರೆ ಪಟಾಕಿ, ಭಜನೆ, ಚೆಂಡೆ ಇವುಗಳಲ್ಲು ಆಗುತ್ತೆ. ಇದನ್ನು ಕೂಡಾ ಇವ್ರು ಬಂದ್ ಮಾಡಿಸ್ತಾರ..? ಮುಂದಿನ ಚುನಾವಣೆಗೆ ರಾಜಕೀಯ ಮಾಡಲಾಗ್ತಾ ಇದೆ. ಇನ್ನೂ ಯಾವುದರಲ್ಲಿ ರಾಜಕೀಯ ಮಾಡ್ತೀರಾ? ಗೊತ್ತಿಲ್ಲ ಎಂದರು.
ಸರ್ಕಾರ, ಸಿಎಂ, ಗೃಹಮಂತ್ರಿ, ಜಿಲ್ಲಾಧಿಕಾರಿ, ಕಮಿಷನರ್ ಎಚ್ಚೆತ್ತುಕೊಳ್ಳಬೇಕಿದೆ. ಜನರಿಗೆ ರಕ್ಷಣೆಯ ಅಗತ್ಯತೆ ಇದೆ. ಅಭಿವೃದ್ಧಿ ಅಗತ್ಯತೆಯಿದೆ. ಕೋಮು ದ್ವೇಷ ಅಲ್ಲ. ಜನರು ಕೂಡಾ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಮಂಗಳೂರಿನಲ್ಲಿ ಮಾಜಿ ಎಂಎಲ್ ಸಿ, ಮುಸ್ಲಿಂ ಸೆಂಟ್ರಲ್ ಕಮೀಟಿ ಅಧ್ಯಕ್ಷ ಹಾಜಿ ಕೆ.ಎಸ್ ಮಹಮ್ಮದ್ ಮಸೂದ್ ಹೇಳಿದ್ದಾರೆ.