ಉಡುಪಿ, ಏ 06 (DaijiworldNews/DB): ಹಿಜಾಬ್ ವಿವಾದ ಎಬ್ಬಿಸಿದ ಆರು ಜನ ವಿದ್ಯಾರ್ಥಿನಿಯರಿಗೆ ಭಯೋತ್ಪಾದನಾ ಸಂಘಟನೆಯ ಜೊತೆಗೆ ಗುರುತಿಸಿಕೊಂಡಿದ್ದ ಉಳ್ಳಾಲದ ಮಹಿಳೆ ಜೊತೆ ಕೂಡ ಸಂಪರ್ಕ ಇರುವ ಅನುಮಾನವಿದೆ ಎಂದು ಉಡುಪಿ ಸರಕಾರಿ ಪಿಯು ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ನಾವು ಸುಮ್ಮನೆ ಪತ್ರಿಕಾ ಹೇಳಿಕೆ ಕೊಟ್ಟ ಕುಳಿತರೆ ಪ್ರಯೋಜನ ಇಲ್ಲ, ನ್ಯಾಯ ಕೊಡಿಸಲು ಸಾಧ್ಯ ಇಲ್ಲ.
ಗೆಲ್ಲು ಕಡಿಯುವ ಬದಲು ಬೇರನ್ನು ಕಿತ್ತು ಎಸೆದರೆ ಮಾತ್ರ ಪರಿಹಾರ ಸಿಗುತ್ತದೆ. ಶರಿಯತ್ ಪ್ರಕಾರ ಅನ್ಯಾಯ ಮಾಡಿದವರಿಗೆ ಯಾವ ರೀತಿ ಕಲ್ಲೆಸೆದು ಶಿಕ್ಷೆ ಕೊಡುತ್ತಾರೋ , ಹಾಗೆ ಇವರಿಗೂ ಆಗಬೇಕು. ಮುಂದೆ ಮುಗ್ಧ ಮಕ್ಕಳು ಇದರ ಬಲಿಯಾಗುವ ಮೊದಲು ಸರಕಾರ ಎಚ್ಚತ್ತು ಕ್ರಮ ತೆಗೆದುಕೊಳ್ಳಬೇಕು ಎಂದವರು ಆಗ್ರಹಿಸಿದರು.
ಅಲ್ಲಾಹು ಅಕ್ಬರ್ ಹೇಳಿದ ವಿದ್ಯಾರ್ಥಿನಿಗೆ ಹಣ ನೀಡಿದ ವೈಮುನ ಮೇಲೆ ಮತ್ತು ಶಾಸಕನ ಮೇಲೆ ಎನ್ಐಎ ತನಿಖೆ ಆಗಲಿ ಎಂದವರು ಇದೇ ವೇಳೆ ಒತ್ತಾಯಿಸಿದರು.
ಈಗಾಗಲೇ ಹಿಜಾಬ್ ವಿಚಾರಕ್ಕೆ ಸಹೋದರ ಹರ್ಷನ ಕೊಲೆಯಾಗಿದೆ. ಇದರ ಬಗ್ಗೆ ಮುಸ್ಲಿಂ ಸಂಘಟನೆಗಳು ಸ್ಪಷ್ಟನೆ ನೀಡಿದ್ದಾರೆ . ಇಂತಹ ಘಟನೆಗಳು ಆದಾಗ ತತ್ಕ್ಷಣ ನಿರ್ಧಾರ ತೆಗೆದು ಕೊಳ್ಳಬೇಕು. ಹಿಜಾಬ್ ವಿಚಾರ ಏಳುತ್ತಲೇ ಒಂದು ನಿರ್ಧಾರಕ್ಕೆ ಬಂದಿದ್ದರೆ ಈ ವಿಷಯಗಳು ಮುಂದುವರಿಯುತ್ತಿರಲಿಲ್ಲ ಎಂದವರು ಇದೇ ವೇಳೆ ತಿಳಿಸಿದರು.