ಉಡುಪಿ, ಏ 06 (DaijiworldNews/HR): ಆರು ಜನ ಹಿಜಾಬ್ ವಿದ್ಯಾರ್ಥಿಗಳಿಗೆ ಭಯೋತ್ಪಾದನೆ ಸಂಘಟನೆ ಪ್ರೋತ್ಸಾಹ ಮಾಡುತ್ತಿದೆ ಎಂದು ಹೇಳಿದ್ದೆ. ಈಗ ಅದೇ ರೀತಿ ಆಲ್ಕೈದಾ ನಾಯಕರೊಬ್ಬರು ಆ ವಿದ್ಯಾರ್ಥಿನಿಯರಿಗೆ ಬೆಂಬಲ ನೀಡಿದ್ದು, ಈ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಮೇಲೆ ಎನ್ಐಎ ತನಿಖೆಯಾಗಲಿ ಎಂದು ಯಶ್ಪಾಲ್ ಸುವರ್ಣ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ದೇಶದ ಅಭಿವೃದ್ಧಿಯ ಜೊತೆಜೊತೆಗೆ ಹಿಂದು ರಾಷ್ಟ್ರದ ರಕ್ಷಣೆ ಮಾಡುವ ಧೀರ ಮತ್ತು ಧೈರ್ಯವಂತ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿ ಬರಬೇಕಾದ ಪರಿಸ್ಥಿತಿ ಎದುರಾಗ್ತಿದೆ. ಆಲ್ಕೈದಾ ನಾಯಕರು ಬೆಂಬಲ ನೀಡುತ್ತಿರುವ ವಿದ್ಯಾರ್ಥಿಗಳು, ಪೋಷಕರ ಮೇಲೆ ಎನ್ಐಎ ತನಿಖೆಯಾಗಲಿ. ಮುಸ್ಲಿಂ ಸಂಘಟನೆಗಳನ್ನು ಬೇರು ಸಹಿತ ಕಿತ್ತು ಎಸೆಯಬೇಕು ಎಂದಿದ್ದಾರೆ.
ಇನ್ನು ಆ ವಿದ್ಯಾರ್ಥಿಗಳ ಕುಂಟುಬವನ್ನು ಬಹಿಷ್ಕರಿಸಬೇಕು. ಆ ಆರು ಜನ ಟೆರರಿಸ್ಟ್ ದೇಶಬಿಟ್ಟು ಓಡಿಸಬೇಕು. 24 ಗಂಟೆಯೊಳಗೆ ಸರಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.