ಮಂಗಳೂರು, ಏ 06 (DaijiworldNews/HR): ಚಹಾ ತರಲು ಹೋಗಿದ್ದ ತುಮಕೂರಿನ 19 ವರ್ಷದ ಯುವತಿಯೊಬ್ಬರು ಏಪ್ರಿಲ್ 4ರಂದು ಮಂಗಳೂರಿನಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಕಾಣೆಯಾದ ಬಾಲಕಿಯನ್ನು ತುಮಕೂರು ಜಿಲ್ಲೆ ಸಿರಾ ತಾಲೂಕಿನ ಕೆಂಚಪ್ಪನ ಹಳ್ಳಿಯ ಕೆ ವಡ್ಡರಹಳ್ಳಿಯ ನಿವಾಸಿ ಪ್ರೇಮಾ ಎಂದು ಗುರುತಿಸಲಾಗಿದೆ.
ನಾನು ಮತ್ತು ನನ್ನ ಪತಿ ಭಾಗಶಃ ಅಂಧತ್ವದಿಂದ ಬಳಲುತ್ತಿರುವುದರಿಂದ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುತ್ತೇವೆ ಎಂದು ಯುವತಿಯ ಚಿಕ್ಕಮ್ಮ ಲಕ್ಷ್ಮಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಅವರು ನಗರದ ಸ್ಟೇಟ್ ಬ್ಯಾಂಕ್ ಬಳಿಯ ರೀಗಲ್ ಪ್ಯಾಲೇಸ್ ಲಾಡ್ಜ್ ನಲ್ಲಿ ವಾಸವಾಗಿದ್ದಾರೆ.
ಪ್ರೇಮಾ ಕಳೆದ ಭಾನುವಾರ ಲಕ್ಷ್ಮಿ ಅವರೊಂದಿಗೆ ಮಂಗಳೂರಿಗೆ ಬಂದಿದ್ದರು. ದಂಪತಿ ಭಿಕ್ಷಾಟನೆಗೆ ತೆರಳುತ್ತಿದ್ದಾಗ ಬಾಲಕಿ ಲಾಡ್ಜ್ನಲ್ಲಿಯೇ ಇರುತ್ತಿದ್ದಳು. ಏಪ್ರಿಲ್ 4ರ ಸೋಮವಾರ ಬೆಳಗ್ಗೆ 7.15ಕ್ಕೆ ಟೀ ತರಲು ಹೋದ ಯುವತಿ ಮಧ್ಯಾಹ್ನದ ನಂತರವೂ ವಾಪಸ್ ಬಂದಿಲ್ಲ. ಪ್ರೇಮಾ ತನ್ನ ಹೆತ್ತವರನ್ನು ಕಳೆದುಕೊಂಡಿದ್ದರಿಂದ ಅವಳನ್ನು ತನ್ನ ಚಿಕ್ಕಮ್ಮನವರು ನೋಡಿಕೊಳುತ್ತಿದ್ದು, ಅವಳಿಗೆ ಓದು ಬರಹ ಗೊತ್ತಿಲ್ಲ. ಅವಳು ಕೆಂಪು ಬಣ್ಣದ ಚೂಡಿದಾರ್ ಧರಿಸಿದ್ದಾಳೆ ಎಂದು ತಿಳಿಸಿದ್ದಾರೆ.
ಯುವತಿಯು ಕಪ್ಪು ಮೈಬಣ್ಣ, 4.5 ಅಡಿ ಎತ್ತರ ಹಾಗೂ ಬಲಗೈ ಮಧ್ಯದ ಬೆರಳನ್ನು ಕಳೆದುಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.