ಬಂಟ್ವಾಳ, ಏ 05 (DaijiworldNews/DB): ಐಪಿಎಲ್ ಬೆಟ್ಟಿಂಗ್ ನಡೆಯುತ್ತಿದ್ದ ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ, ಕೆಲವು ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುದ್ರಿಯ ಎಂಬ ಸ್ಥಳದಲ್ಲಿ ಬೆಟ್ಟಿಂಗ್ ನಡೆಯುತ್ತಿತ್ತು. ಬಂಧಿತರನ್ನು ಕರುಣಾಕರ್, ಶರತ್ ಕುಮಾರ್ ಮತ್ತು ಅವಿನಾಶ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 10 ಸಾವಿರ ರೂ. ಬೆಲೆ ಬಾಳುವ ಒಂದು ಲ್ಯಾಪ್ ಟಾಪ್, 15, 500, ರೂ. ನಗದು ಮತ್ತು ಆರು ಸ್ಮಾರ್ಟ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೋಮವಾರ ಲಕ್ನೋ ಮತ್ತು ಹೈದ್ರಾಬಾದ್ ಆಟಗಾರರ ತಂಡ ಆಟವಾಡುತ್ತಿದ್ದ ವೇಳೆ ರಾತ್ರಿ 9.45 ರ ವೇಳೆಗೆ ಬೆಟ್ಟಿಂಗ್ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ಇಲ್ಲಿಗೆ ದಾಳಿ ನಡೆಸಿತ್ತು. ಪೊಲೀಸರ ತಂಡದಲ್ಲಿ ಸ್ಟೇಶನ್ ಇನ್ಸ್ಪೆಕ್ಟರ್ ನಾಗರಾಜ ಎಚ್., ಎಸ್ಐ ಸಂದೀಪ್ಕುಮಾರ್ ಶೆಟ್ಟಿ ಮತ್ತು ಇತರ ಸಿಬಂದಿ ಭಾಗವಹಿಸಿದ್ದರು. ಮುಂದಿನ ತನಿಖೆ ನಡೆಯುತ್ತಿದೆ.