ಪುತ್ತೂರು,ಡಿ 25 (MSP): ಪಡುವನ್ನೂರು ಗ್ರಾಮದ ಸರ್ಕಾರಿ ಸ್ಥಳದಿಂದ ಅಕ್ರಮವಾಗಿ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಪರಿವರ್ತಿಸಿ ಸಾಗಣೆ ಮಾಡುತ್ತಿದ್ದ ಪ್ರಕರಣ ಪತ್ತೆ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ಮರದ ದಿಮ್ಮಿಗಳು, ಕ್ರೇನ್ ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.
ಆಕೇಶಿಯ ಮತ್ತು ಮ್ಯಾಂಜಿಯಂ ಮರಗಳನ್ನು ಕಡಿದು ಸಾಗಿಸುತ್ತಿದ್ದ ವೇಳೆ ಪಾಣಾಜೆ ಶಾಖಾ ಉಪವಲಯ ಅರಣ್ಯಧಿಕಾರಿ ಎಸ್.ಎನ್ ಲೋಕೇಶ್, ಕಾಳ ಬೈರವ ಗಸ್ತಿನ ಉಪವಲಯ ಅರಣ್ಯಾಧಿಕಾರಿ ಸೀತಾರಾಮ, ಅರಣ್ಯ ಅರಣ್ಯ ರಕ್ಷಕರಾದ ಮೋಹನ್.ಜಿ , ಉಮೇಶ್, ರಾಮಗೌಡ ಪಾಟೀಲ್ ದಿನೇಶ್ ಅರಣ್ಯ ವೀಕ್ಷಕರಾದ ದೀಪಕ್ ಮತ್ತು ದೇವಪ್ಪ ನಾಯ್ಕ, ಹಾಗೂ ಜೀಪು ಚಾಲಕ ಜಗದೀಶ್ ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ.
ಅಕೆಶಿಯ ಮತ್ತು ಮ್ಯಾಂಜಿಯಂ ಮರದ 102 ದಿಮ್ಮಿ ಹಾಗೂ ವಾಹನಗಳ ಮೌಲ್ಯ 5 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.