ಉಡುಪಿ, ಏ 05 (DaijiworldNews/HR): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕರಿಗೆ ಸಮಸ್ಯೆ ಪರಿಹಾರ ಮಾಡುತ್ತಿರುವುದಕ್ಕಿಂತ ಹೆಚ್ಚು ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಅಂತಹ ನೂರಾರು ನಿದರ್ಶನ ಹೆಚ್ಚಿನ ಕಡೆಗಳಿಲ್ಲಿ ಕಾಣ ಸಿಗುತ್ತವೆ. ಒಂದು ಕಡೆ ಸರ್ವಿಸ್ ರಸ್ತೆ ಅರ್ಧಕ್ಕೆ ಬಿಟ್ಟಿದ್ದರೆ, ಇನ್ನೊಂದು ಕಡೆಯಲ್ಲಿ ಸರ್ವಿಸ್ ರೋಡ್ ಎಲ್ಲಿ ಅಂತ ಹುಡುಕಬೇಕು.
ರಸ್ತೆ ಕಾಮಗಾರಿ ಮಾಡುವಾಗ ಒಂದು ಇಲಾಖೆ ಮತ್ತು ಮತ್ತೊಂದು ಇಲಾಖೆಯ ಜೊತೆ ಪರಸ್ಪರ ಚರ್ಚೆ-ಮಾತುಕತೆ ಇರಬೇಕು. ಆದರೆ ಇಲ್ಲಿ ಒಂದು ಇಲಾಖೆ ಅಗೆಯುತ್ತಾ ಬಂದರೆ ಇನ್ನೊಂದು ಆ ದಾರಿಯನ್ನು ಮುಚ್ಚುತ್ತಾ ಬರುತ್ತದೆ ಕೊನೆಗೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಾರೆ.
ಇದು ಸಂತೆಕಟ್ಟೆ -ಆಶೀರ್ವಾದದ ಬಳಿ, ರಾಷ್ಟ್ರೀಯ ಹೆದ್ದಾರಿ ಆದ ಅನೇಕ ವರ್ಷಗಳ ಮೇಲೆ ಸರ್ವಿಸ್ ರಸ್ತೆ ಕಾಮಗಾರಿ ಮಾಡಲು ಪ್ರಾಧಿಕಾರ ಹೊರಟಿದೆ. ಆದರೆ ಕಾಮಗಾರಿ ಪ್ರಗತಿಯಲ್ಲಿದ್ದರೂ ಸರ್ವಿಸ್ ರಸ್ತೆಯ ಮಧ್ಯೆ ಇರುವ ಮೂರು ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡದೆ ಹಾಗೆಯೆ ಉಳಿಸಿಕೊಂಡು ರಸ್ತೆ ಕಾಮಗಾರಿ ನಡೆಸುತ್ತಿದ್ದಾರೆ. ಇದು ಆ ದಾರಿಯಲ್ಲಿ ಗೊತ್ತಿಲ್ಲದೇ ಗಾಡಿ ಚಲಾಯಿಸುವ ವಾಹನಗಳಿಗೆ ಅಪಾಯಕಾರಿಯಾಗಿದೆ.
ಇನ್ನೊಂದು ಅಪಾಯಕ್ಕೆ ಆಹ್ವಾನಿಸುತ್ತಿರುವ ಸ್ಥಳ ಎಂದರೆ ಬ್ರಹ್ಮಾವರ-ಪೇತ್ರಿ ರಸ್ತೆ. ಇಲ್ಲಿ ರಸ್ತೆ ಅಗಲೀಕರಣ ಕೆಲಸ ನಡೆಯುತ್ತಿದೆ. ರಸ್ತೆ ಅಗಲೀಕರಣ ಆಗುತ್ತಿರುವಾಗಲೇ ಮುನ್ನಚ್ಚರಿಕೆ ವಹಿಸಿ ಟ್ರಾನ್ಸ್ ಫರ್ಮಾರ್ ಅಳವಡಿಸಿಯಬಹುದಿತ್ತು. ಆದರೇ ಅದನ್ನು ಸ್ಥಳಾಂತರ ಮಾಡದೆ ಹಾಗೆಯೇ ಬಿಟ್ಟು ಹೋಗಿದ್ದಾರೆ. ಇಂತಹ ಅಪಾಯ ಎದುರಾಗುವ ಕೆಲಸಗಳು ನಡೆಯುತ್ತಿವೆ. ಈ ಕಂಬದ ಮೇಲೆ ಅಥವಾ ಅಡ್ಡವಾಗಿ ಸೂಚನಾ ಫಲಕವನ್ನು ಕೂಡ ಹಾಕುವುದಿಲ್ಲ. ಸಾರ್ವಜನಿಕರ ದೂರಿಗೆ ಇಲಾಖೆ ಕಿವುಡರಂತೆ ವರ್ತಿಸುತ್ತದೆ. ಸಮಸ್ಯೆಗಳು ಎದುರೇ ಕಂಡರೂ ಸಾಮಾಜಿಕ ಕಳಕಳಿ ತೋರದೆ, ಈ ಸಮಸ್ಯೆ ತಮ್ಮದಲ್ಲ ಎನ್ನುವಂತೆ ಕಣ್ಣುಮುಚ್ಚಿಕೊಂಡು ಹೋಗುತ್ತಾರೆ. ಸದ್ಯ ಸಂತೆಕಟ್ಟೆ- ಆಶೀರ್ವಾದ ಸರ್ವೀಸ್ ರಸ್ತೆಯ ನಡು ಮಧ್ಯೆ ಇರುವ ವಿದ್ಯುತ್ ಕಂಬ ಮತ್ತು ಬ್ರಹ್ಮಾವರ-ಪೇತ್ರಿ ರಸ್ತೆಯಲ್ಲಿರುವ ಟ್ರಾನ್ಸ್ ಫರ್ಮರ್ ಕೂಡಲೇ ತೆರವು ಗೊಳಿಸಬೇಕು ಅಥವಾ ಸ್ಥಳಾಂತರಿಸುವಂತೆ ಮೆಸ್ಕಾಂ ಇಲಾಖೆ ಕೂಡಲೇ ಸ್ಪಂದಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೇ.