ಮಂಗಳೂರು, ಏ. 04 (DaijiworldNews/SM): ರಾಜ್ಯದಲ್ಲಿ ಅಶಾಂತಿಯ ವಾತಾವರಣವಿದ್ದು, ರಾಜ್ಯ ಸರಕಾರ ಕಣ್ಮುಚ್ಚಿ ಕುಳಿತಿದೆ ಬಿಜೆಪಿ, ಅದರ ಸಹಸಂಘಟನೆಗಳು ಇದೆಲ್ಲಕ್ಕೂ ಕಾರಣ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ, ಸಚಿವರು ಅದಕ್ಕೆ ಪೂರಕವಾಗಿ ನಡೆಯುತ್ತಿದ್ದಾರೆ. ಬಜರಂಗದಳಕ್ಕೆ ಸರಕಾರ ಪರೋಕ್ಷ ಬೆಂಬಲ ನೀಡುತ್ತಿದೆ. ಬೊಮ್ಮಾಯಿ ಅವರಿಗೆ ಸಿಎಂ ಆಗಿ ಮುಂದುವರೆಯುವ ನೈತಿಕತೆ ಇಲ್ಲ. ಇಂತಹ ರಾಜಕಾರಣದಿಂದ ಜನರು ಬಿಜೆಪಿಯನ್ನು ಬೆಂಬಲಿಸಲ್ಲ ದೇವಸ್ಥಾನದ ಹೊರಗಡೆ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವ ಬಗ್ಗೆ ಸರಕಾರ ಇನ್ನೂ ತನ್ನ ನಿಲುವು ಸ್ಪಷ್ಟಪಡಿಸಿಲ್ಲ. ಸರಕಾರದ ಸಚಿವರೇ ಮುಸ್ಲಿಂ ಅಂಗಡಿಗಳಿಗೆ ಹೋಗದಂತೆ ಹೇಳುತ್ತಿದ್ದಾರೆ ಎಂದು ಐವನ್ ಡಿಸೋಜ ಆರೋಪಿಸಿದ್ದಾರೆ.