ಕುಂದಾಪುರ, ಏ. 04 (DaijiworldNews/SM): ಕರ್ನಾಟಕ ಪೊಲೀಸ್ ಕಾಯ್ದೆಯಲ್ಲಿ ಮೈಕ್ ಬಳಸಲು ಹಲವಾರು ನಿಬಂಧನೆಗಳಿದೆ. ಆ ನಿಬಂಧನೆಗೊಳಪಟ್ಟು ಯಾರೂ ಬೇಕಾದರು ಧ್ವನಿವರ್ಧಕ ಬಳಸಬಹುದು ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದರು.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಉಪ್ಪುಂದ ಎಂಬಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೆ.ಪಿ. ಆಕ್ಟ್ ಅಡಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ತನಕ ಧ್ವನಿವರ್ಧಕ ಬಳಕೆಗೆ ಪರವಾನಿಗೆ ನೀಡಲಾಗುತ್ತದೆ. ಆದರೆ 50 ಅಡಿಗಿಂತ ಜಾಸ್ಥಿ ಹೋಗಬಾರದೆಂದು ನಿಯಮವಿದೆ. ಇದೆಲ್ಲಾ ನಿಬಂದನೆ ಪಾಲಿಸಿ ಯಾರೂ ಬೇಕಾದರೂ ಬಳಸಬಹುದು ಎಂದು ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸಚಿವರು ಪ್ರಕುಂದಾಪುರ: ಕರ್ನಾಟಕ ಪೊಲೀಸ್ ಕಾಯ್ದೆಯಲ್ಲಿ ಮೈಕ್ ಬಳಸಲು ಹಲವಾರು ನಿಬಂಧನೆಗಳಿದೆ. ಆ ನಿಬಂಧನೆಗೊಳಪಟ್ಟು ಯಾರೂ ಬೇಕಾದರು ಧ್ವನಿವರ್ಧಕ ಬಳಸಬಹುದು ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದರು.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಉಪ್ಪುಂದ ಎಂಬಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೆ.ಪಿ. ಆಕ್ಟ್ ಅಡಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ತನಕ ಧ್ವನಿವರ್ಧಕ ಬಳಕೆಗೆ ಪರವಾನಿಗೆ ನೀಡಲಾಗುತ್ತದೆ. ಆದರೆ 50 ಅಡಿಗಿಂತ ಜಾಸ್ಥಿ ಹೋಗಬಾರದೆಂದು ನಿಯಮವಿದೆ. ಇದೆಲ್ಲಾ ನಿಬಂದನೆ ಪಾಲಿಸಿ ಯಾರೂ ಬೇಕಾದರೂ ಬಳಸಬಹುದು ಎಂದು ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸಚಿವರು ಪ್ರತಿಕ್ರಿಯಿಸಿದರು.
ಹಲಾಲ್, ಝಟ್ಕಾ ವಿಚಾರದಲ್ಲಿ ಸರಕಾರದ ನಿಲುವು ಮುಖ್ಯವಲ್ಲ. ಜನರ ಆಹಾರ, ಖರೀದಿ ವ್ಯವಸ್ಥೆ ತೀರ್ಮಾನ ಅವರದ್ದೆ ಆಗಿದೆ. ಅದು ಜನರ ಅಭಿಪ್ರಾಯ, ಆಶೋತ್ತರಗಳಾಗಿದ್ದು ಇಷ್ಟದಂತೆ ಬಳಸಬಹುದು.
ಕಾಮಾಲೆ ಕಣ್ಣಿನವರಿಗೆ ಜಗತ್ತು ಹಳದಿಯೆಂಬಂತೆ ಕಾಂಗ್ರೆಸ್ ಪಕ್ಷ ವರ್ತನೆ ಮಾಡುತ್ತಿದೆ. ಅವರಿಗೆ ತಮ್ಮ ತಪ್ಪನ್ನು ಮುಚ್ಚಿಹಾಕಿಕೊಳ್ಳಲು ಬಿಜೆಪಿ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ. ಆಹಾರ ಪದಾರ್ಥ ವಿಚಾರದಲ್ಲಿ ಜನರೇ ತೀರ್ಮಾನಿಸಬೇಕು ಎಂಬುದನ್ನು ಕಾಂಗ್ರೆಸ್ ಅಥವಾ ಬಿಜೆಪಿ ನಿರ್ಣಯಿಸಲು ಆಗಲ್ಲ. ಜನರೇ ಬೇಡ ಎಂದರೆ ನಾವು ಒತ್ತಾಯ ಮಾಡೋಕಾಗಲ್ಲ. ಕಾಂಗ್ರೆಸ್ಸಿಗರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತಿದೆ ಎಂದು ಆರೋಪಿಸಿದರು.