ಕಾರ್ಕಳ, ಏ 04 (DaijiworldNews/MS): ದೇಶದ ಅಭಿವೃದ್ಧಿಗೆ ಪೂರಕವಾಗಿ ಉದ್ಯಮಕ್ಷೇತ್ರಗಳು ಪ್ರಗತಿಹೊಂದಬೇಕು. ಯುವಸಮುದಾಯಕ್ಕೆ ಉದ್ಯೋಗ ಲಭಿಸುವಂತಾಗಬೇಕು ಎಂದು ನಿಟ್ಟೆ ಡೀಮ್ಡ್ ವಿ ವಿ ಯ ಪ್ರೊ ಛಾನ್ಸಲರ್ ವಿಶಾಲ್ ಹೆಗ್ಡೆ ಹೇಳಿದರು.
ನಿಟ್ಟೆ ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಕಾಲೇಜಿನಲ್ಲಿ ಕೆ ಉಲ್ಲಾಸ್ ಕಾಮತ್ ಸೆಂಟರ್ ಫಾರ್ ಫ್ಯಾಮಿಲಿ ಮ್ಯಾನೇಜ್ಡ್ ಬ್ಯುಸಿನೆಸ್ ಆಶ್ರಯದಲ್ಲಿ ನಡೆಯುವ ೪ ದಿನಗಳ ದಿಶಾ -೨೦೨೨ ಕಾರ್ಯಾಗಾರದಲ್ಲಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯಮಗಳು ಮುಂದುವರಿಯಲು ಸಾಕಷ್ಟು ಕಠಿಣ ಸವಾಲುಗಳು ಇವೆ. ಅವೆಲ್ಲವನ್ನು ಮೆಟ್ಟಿನಿಂತು ಎದುರಿಸಿದಾಗ ಮಾತ್ರ ಯಶಸ್ಸುಕಾಣಲು ಸಾಧ್ಯ. ಮ್ಯಾನೆಜ್ಮೆಂಟ್ ಸಂಸ್ಥೆಯ ಸಂಪನ್ಮೂಲ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಪರಿಣಿತರು ಸೇರಿ ಕುಟುಂಬ ಯೋಜನೆ ಉದ್ದಿಮೆಯನ್ನು ಮುಂದಿನ ಪೀಳಿಗೆಗೆ ಗುರಿತಿಸಿಬೇಕು. ಅದರಿಂದ ಭಾರತೀಯ ಸಂಸ್ಕೃತಿಯ ನೆಲೆಗಟ್ಟು ಕಾಣಲು ಸಾಧ್ಯವೆಂದರು.
ಇಂತಹ ತರಬೇತಿಗಳು ನಿಟ್ಟೆ ಸಮೂಹ ಸಂಸ್ಥೆಗಳಾದ ನಿಟ್ಟೆ ಕ್ಯಾಂಪಾಸ್ , ಯಲಹಂಕ ಹಾಗೂ ದೇರಳ ಕಟ್ಟೆಯ ಹಮ್ಮಿಕೊಳ್ಳಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಉದ್ಯಮಶೀಲ ರಾಗಬೇಕು. ಕಾರ್ಯಗಾರವು ವಿಪುಲ ಅವಕಾಶ ನೀಡುತ್ತಿದೆ ಎಂದರು.
ಕೆ ಉಲ್ಲಾಸ್ ಕಾಮತ್ ಸೆಂಟರ್ ಫಾರ್ ಫ್ಯಾಮಿಲಿ ಮ್ಯಾನೇಜ್ಡ್ ಬ್ಯುಸಿನೆಸ್ ನ ಮುಖ್ಯಸ್ಥ ಕೆ ಉಲ್ಲಾಸ್ ಕಾಮತ್ ಮಾತನಾಡಿ, ಬಹುಪ್ರಮುಖ್ಯವಾಗಿರುವ ದಾನಗಳಲ್ಲಿ ಅನ್ನದಾ, ವಿದ್ಯಾದಾನ ಮಹತ್ವ ಸ್ಥಾನ ಹೊಂದಿವೆ. ಅನ್ನದಾನದಿಂದ ಹಸಿವೆ ನೀಗಿಸಬಹುದಾಗಿದೆ. ವಿದ್ಯಾದಾನ ಪಡೆದವನು ತನ್ನ ಜೀವಿತಾವಧಿಯ ವರೆಗೂ ಅದರ ಜ್ಞಾನದಿಂದ ವೃದ್ಧಿಯಾಗುತ್ತಾನೆ. ಜ್ಞಾನ ಶಕ್ತಿಯೇ ಉದ್ಯಮ ವ್ಯವಹಾರದ ಉತ್ತುಂಗದ ಪ್ರೇರಣಾ ಶಕ್ತಿಯಾಗಿದೆ. ನಂಬಿಕೆ ಮೇಲೆ ಎಲ್ಲ ವ್ಯವಹಾರಗಳು ನಡೆಯುತ್ತದೆ. ಅತೀಯಾದ ನಂಬಿಕೆಯೂ ಕೆಲವೊಮ್ಮೆ ಅದನ್ನೆಲ್ಲ ಹುಸಿಯಾಗಿಗೊಳಿಸುತ್ತದೆ.
ಯಶಸ್ವಿ ಉದ್ಯಮಿಗಳ ಯಶೋಗಾಥೆಯನ್ನು ಕೇಳಿ ಧನಾತ್ಮಕವಾಗಿ ಚಿಂತಿಸಿದಾಗ ಉದ್ಯಮ ವ್ಯವಹಾರದ ಬಾಗಿಲು ಸದಾ ತೆರೆಯುತ್ತದೆ. ಯಶಸ್ಸು ಉದ್ಯಮಿಗಳು ಅದರ್ಶಪ್ರಾಯರಾಗಬೇಕು. ಶೈಕ್ಷಣಿಕ ಕಾಲಘಟ್ಟದಲ್ಲಿ ಉದ್ಯಮ ಕೌಶಲ್ಯ ತರಬೇತಿಗೆ ಹೆಚ್ಚಿನ ಮಹತ್ವ ನೀಡಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ನಮ್ಮೆಲ್ಲರ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಕಾಲೇಜಿನ ನಿರ್ದೇಶಕ ಡಾ ಕೆ ಶಂಕರನ್, ಪ್ರೊ. ಸುಧೀರ್ ರಾಜ್ ಉಪಸ್ಥಿತರಿದ್ದರು. ಅನುಶ್ಕಾ, ಅನುರಾಧ ಪ್ರಾರ್ಥನೆಗೈದರು. ಸಿದ್ಧಾರ್ಥ್ ಪೈ ಸ್ವಾಗತಿದರು. ಲಕ್ಷ್ಮೀನಾರಾಯಣ ಧನ್ಯವಾವಿತ್ತರು.