ಮಂಗಳೂರು, ಏ. 02 (DaijiworldNews/SM): ವ್ಯಾಪಾರ ಮಾಡಬೇಡಿ ಎಂದರೆ, ಮುಸ್ಲಿಮರ ವ್ಯವಹಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಹಲಾಲ್ ಮಾಡಿದನ್ನು ತಿನ್ನಬೇಕೆಂದು ನಾವು ಒತ್ತಾಯಿಸಿಲ್ಲ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.
ದೈಜಿವರ್ಲ್ಡ್ ಜೊತೆ ಮಾತನಾಡಿದ ಅವರು, ರಂಜಾನ್ ನಲ್ಲಿ ಹಿಂದೂ ವ್ಯಾಪಾರಗಳೊಂದಿಗೆ ವ್ಯವಹಾರ ಮಾಡಿ. ಅವರು ಹೆಚ್ಚಾಗಿ ಹಲಾಲ್ ಮಾಂಸದಂಗಡಿಯಲ್ಲಿ ತಿನ್ನುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಹಲಾಲ್ ಎಂದರೆ ಧರ್ಮ ಸಮ್ಮತ್ತವಾದ ಕೆಲವು ಪ್ರಾಣಿ ಪಕ್ಷಿಗಳ ವಧೆಯಾಗಿದೆ. ಆದರೆ ಜಟ್ಕಾ ಕಟ್ ಎಂದರೆ ಯಾವುದನ್ನು ಕಡಿಯಬಹುದು. ಹಲಾಲ್ ವಿಧಾನ ಧರ್ಮಸಮ್ಮತ್ತವಾದ ವಿಧಿಗಳ ಪ್ರಕಾರ ಮತ್ತು ವಿಜ್ಞಾನ ಕೂಡಾ ಆಗಿದೆ. ಸಿಎಂ ಹೇಳಿದಂತೆ ತಿನ್ನುವ ಆಹಾರದಲ್ಲಿ ಸರ್ಕಾರದ ಮಧ್ಯ ಪ್ರವೇಶ ಸರಿಯಲ್ಲ. ನಾವು ಹಲಾಲ್ ಮಾಡದೆ ಆಹಾರ ಸೇವನೆ ಮಾಡಲ್ಲ ಎಂದು ಅವರು ಹೇಳಿದ್ದಾರೆ.
ಹಿಂದೂಗಳು ನಮ್ಮವರ ವ್ಯಾಪಾರ ಬರದಿದ್ರೆ ಬೇಡ. ನಮ್ಮವರಿಗೆ ನಾವು ಹಾಗೇ ಏನು ಹೇಳಲ್ಲ. ಮುಸ್ಲಿಂಮರ ಅಂಗಡಿಗೆ ಹೋಗಬೇಡಿ ಎಂದರೆ ನಮಗೆ ವ್ಯಾಪಾರ ಹೆಚ್ಚಾಗುತ್ತದೆ. ನಮ್ಮವರಿಗೆ ಏನು ಸಮಸ್ಯೆ ಆಗಲ್ಲ ಎಂದು ಮಂಗಳೂರಿನಲ್ಲಿ ಮಾಜಿ ಎಂಎಲ್ ಸಿ ಹಾಗೂ ಮುಸ್ಲಿಂ ಸೆಂಟ್ರಲ್ ಕಮೀಟಿ ಅಧ್ಯಕ್ಷ ಹಾಜಿ ಕೆ.ಎಸ್. ಮಹಮ್ಮದ್ ಮಸೂದ್ ಹೇಳಿದ್ದಾರೆ.