ಕಾಸರಗೋಡು, ಏ 02 (DaijiworldNews/MS): ಚಟ್ಟಂಚಾಲ್ ನಲ್ಲಿ ನಿರ್ಮಿಸಿರುವ ಜಿಲ್ಲೆಯ ಪ್ರಥಮ ಆಕ್ಸಿಜನ್ ಪ್ಲಾಂಟ್ ನ್ನು ಕೈಗಾರಿಕಾ ಸಚಿವ ಪಿ . ರಾಜೀವ್ ಏ.02ರ ಶನಿವಾರ ಉದ್ಘಾಟಿಸಿದರು.
ಕೈಗಾರಿಕೆ, ಕಾನೂನು ಸಚಿವ ಪಿ.ರಾಜೀವ್ ಮಾತನಾಡಿ, ಖಾಸಗಿ ವಲಯದಲ್ಲಿ ಉದ್ಯಮ ಆರಂಭಿಸಲು ಕೈಗಾರಿಕೋದ್ಯಮಿಗಳು ಮುಂದೆ ಬಂದು 10 ಎಕರೆ ಭೂಮಿಯನ್ನು ಕಂಡುಕೊಂಡರೆ ಮೂಲಸೌಕರ್ಯ ಅಭಿವೃದ್ಧಿ ಸೌಲಭ್ಯಗಳೊಂದಿಗೆ ಖಾಸಗಿ ಕೈಗಾರಿಕಾ ಪಾರ್ಕ್ ಅನ್ನು ಸರ್ಕಾರ ನೀಡುತ್ತದೆ. ಚಟ್ಟಂಚಾಲ್ ಕೈಗಾರಿಕಾ ಪಾರ್ಕ್ನಲ್ಲಿ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಆರಂಭಗೊಂಡ ಜಿಲ್ಲೆಯ ಮೊದಲ ಆಮ್ಲಜನಕ ಘಟಕವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು. ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದೊಂದಿಗೆ ಪ್ಲಾಂಟ್ ನಿರ್ಮಿಸಲಾಗಿದೆ. ಸಮಾರಂಭದಲ್ಲಿ ಶಾಸಕ ಸಿ . ಎಚ್ ಕುಞ೦ಬು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ. ಸಜಿತ್ ಕುಮಾರ್ ವರದಿ ಮಂಡಿಸಿದರು. ಸಂಸದ ರಾಜಮೋಹನ್ ಉಣ್ಣಿ ತ್ತಾ ನ್ ವೈದ್ಯಕೀಯ ಆಮ್ಲಜನಕದ ಮೊದಲ ಆದೇಶವನ್ನು ಸ್ವೀಕರಿಸಿದರು. ಇಂಡಸ್ಟ್ರಿಯಲ್ ಆಕ್ಸಿಜನ್ ಮೊದಲ ಆದೇಶವನ್ನು ಎನ್.ಎ.ನೆಲ್ಲಿಕುನ್ನು ಶಾಸಕರು ಸ್ವೀಕರಿಸಿದರು. ಕುಟುಂಬಶ್ರೀ ನಿಧಿಯನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ವಿತರಿಸಿದರು. ಕೇರಳ ಆಟೋಮೊಬೈಲ್ ವರ್ಕ್ಶಾಪ್ ಮಾಲೀಕರ ಸಂಘ, ಕ್ವಾಲಿಟಿ ಟ್ರೇಡರ್ಸ್ ಕಾಸರಗೋಡು, ಕೆಇಎ ಕುವೈತ್, ಬಿಜು ಟ್ರೇಡರ್ಸ್ ಕಾಸರಗೋಡು, ಕೇರ್ ಸಿಸ್ಟಮ್ ಕೊಚ್ಚಿ ಮತ್ತು ನಿರ್ಮಿತಿ ಕೇಂದ್ರವನ್ನು ಆಕ್ಸಿಜನ್ ಸಿಲಿಂಡರ್ ಚಾಲೆಂಜ್ ಅನ್ನು ಸ್ವೀಕರಿಸಿ ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡಿದಕ್ಕಾಗಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಗೀತಾ ಕೃಷ್ಣನ್, ಕೆ. ಶಕುಂತಲಾ, ಎಸ್.ಎನ್.ಸರಿತಾ, ಶಿನೋಜ್ ಚಾಕೋ, ನಗರಸಭೆ ಅಧ್ಯಕ್ಷರಾದ ವಿ.ಎಂ.ಮುನೀರ್, ಟಿ.ವಿ.ಶಾಂತಾ, ಬ್ಲಾಕ್ ಪಂಚಾ ಯತ್ ಅಧ್ಯಕ್ಷ ಕೆ.ಮಣಿಕಂಠನ್ , ಬ್ಲಾಕ್ ಪಂಚಾ ಯತ್ ಕಾರ್ಯದರ್ಶಿ ಎಂ.ಲಕ್ಷ್ಮಿ, ಕೆ.ಪಿ.ವತ್ಸಲನ್, ಪಂಎ.ಪಿ.ಉಷಾ, ಚೆಮ್ನಾಡ್ ಪಂಚಾಯತ್ ಅಧ್ಯಕ್ಷೆ ಸುಫೈಜಾ ಅಬೂಬಕರ್, ಬ್ಲಾಕ್ ಪಂಚಾ ಯತ್ ಸದಸ್ಯೆ ಶಮೀಮಾ ಅನ್ಸಾರಿ, ವಾರ್ಡ್ ಸದಸ್ಯ ಟಿ.ಪಿ.ನಿಸಾರ್, ಜಿಲ್ಲಾ ಪಂಚಾಯಿತಿ ಯೋಜನಾ ಸಮಿತಿ ಉಪಾಧ್ಯಕ್ಷ ಸಿ. ತ್ಯಾಂಪನ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜಮೋಹನ್, ಹಣಕಾಸು ಅಧಿಕಾರಿ ಶಿವಪ್ರಕಾಶ್, ಜಿಲ್ಲಾ ಯೋಜನಾಧಿಕಾರಿ ಮಾಯಾ ಎ.ಎಸ್., ಪಂಚಾಯತ್ ಉಪನಿರ್ದೇಶಕ ಜೇಸನ್ ಮ್ಯಾಥ್ಯೂ, ಡಿಎಂಒ ಡಾ.ಎ.ವಿ.ರಾಮದಾಸ್ ಮತ್ತು ಕುಟುಂಬಶ್ರೀ ಜಿಲ್ಲಾ ಮಿಷನ್ ಕೋ-ಆರ್ಡಿನೇಟರ್ ಟಿ.ಕೆ.ಟಿ.ಸುರೇಂದ್ರನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಪಿ.ಸಜೀರ್. , ಕೇರಳ ಸಣ್ಣ ಕೈಗಾರಿಕೆಗಳ ಸಂಘದ ಪ್ರತಿನಿಧಿ ಪಿ.ವಿ.ರವೀಂದ್ರನ್, ಉತ್ತರ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿ ಶ್ಯಾಮಪ್ರಸಾದ್ ಮತ್ತು ಕೇರಳ ಆಟೋಮೊಬೈಲ್ ವರ್ಕ್ ಶಾಪ್ ಅಸೋಸಿಯೇಶನ್ ಪ್ರತಿನಿಧಿ ಗುಣೇಂದ್ರಲಾಲ್ ಸುನೀಲ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸ್ವಾಗತಿಸಿ, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಕೆ. ಪ್ರದೀಪನ್ ವಂದಿಸಿದರು.