ಬಂಟ್ವಾಳ, ಏ 1 (DaijiworldNews/HR): ಮೆಲ್ಕಾರ್ನಲ್ಲಿ ಅಂಗಡಿ ಮಳಿಗೆಗಳನ್ನು ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದ್ದು, ಅದನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯರು ಶುಕ್ರವಾರ ಪುರಸಭೆಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೋಲೀಸರು ಪ್ರತಿಭಟನಾಕಾರರಲ್ಲಿ ಬೀಗ ತೆಗೆಯುವಂತೆ ಹೇಳಿದ ಬಳಿಕ ಬೀಗ ತೆರವು ಮಾಡಿ ಪ್ರತಿಭಟನೆ ನಡೆಸಿದರು.
ಮೆಲ್ಕಾರ್ನಲ್ಲಿ ಅಕ್ರಮ ಅಂಗಡಿಗಳನ್ನು ತೆರವು ಮಾಡುವಂತೆ ಸ್ಥಳೀಯ ರ ದೂರಿನಂತೆ ಎ.ಸಿ.ಸ್ಥಳ ಪರಿಶೀಲನೆ ನಡೆಸಿದ್ದರು, ಅಬಳಿಕ ನ್ಯಾಯಾಲಯದ ಆದೇಶದಂತೆ ಅಂಗಡಿಗಳನ್ನು ತೆರವು ಮಾಡುಂತೆ ನೋಟಿಸ್ ಜಾರಿಮಾಡಲಾಗಿತ್ತು. ಆದರೆ ಪುರಸಭೆ ನೋಟಿಸ್ ಜಾರಿ ಮಾಡಿ ಅಂಗಡಿ ತೆರವು ಮಾಡುವುದಕ್ಕೆ ಮುಂದಾಗಿಲ್ಲ ಎಂದು ಅರೋಪಿಸಿ ಇದಕ್ಕೆ ಪುರಸಭೆಯ ಒಳ ಒಪ್ಪಂದ ಕಾರಣ ಎಂದು ಪ್ರತಿಭಟನೆ ನಿರತರು ಬೀಗಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಎ.ಸಿ ಬರುವವರಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪುರಸಭೆಯ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಬುಡಾ ಸದಸ್ಯ ಸಚಿನ್ ಮೆಲ್ಕಾರ್ ನೇತೃತ್ವದಲ್ಲಿ ಪ್ರಮುಖರಾದ ರೂಪೇಶ್ ಆಚಾರ್ಯ, ಲೋಹಿತ್ ಪಣೋಲಿಬೈಲ್, ಗುರುರಾಜ್ ಬಂಟ್ವಾಳ, ಖಾಲಿದ್ ನಂದಾವರ, ಪ್ರಸನ್ನ ಮೆಲ್ಕಾರ್, ಸುದರ್ಶನ್ ಮೆಲ್ಕಾರ್, ಪ್ರದೀಪ್ ಅಜ್ಜಿಬೆಟ್ಟು, ಸುರೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.