ಮಂಗಳೂರು, ಏ 1 (DaijiworldNews/HR): ಸ್ಮಾಟ್ ಸಿಟಿ ವತಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ ನೂರ್ ಮಸೀದಿ ರಸ್ತೆ ಹಾಗೂ ಕೊಡಿಯಾಲ್ ಗುತ್ತು ಜೈಲು ರಸ್ತೆ ಅಭಿವೃಧ್ಧಿ ಕಾಮಗಾರಿ ಕೈಗೊಂಡ ಪ್ರಯುಕ್ತ ಆ ರಸ್ತೆಗಳಲ್ಲಿ ಮೋಟಾರು ವಾಹನ ಕಾಯ್ದೆ ಪ್ರಕಾರ ಏ.1 ರಿಂದ ಮೇ.30 ರವರೆಗೆ 60 ದಿನಗಳ ಕಾಲ ರಸ್ತೆ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಸಾಂಧರ್ಬಿಕ ಚಿತ್ರ
ನೂರ್ ಮಸೀದಿ ರಸ್ತೆ ಕಾಮಗಾರಿ ನಡೆಯುವ ವೇಳೆ ಹಂಪನಕಟ್ಟೆ ಕಡೆಯಿಂದ ನೂರು ಮಸೀದಿ ರಸ್ತೆಯ ಮೂಲಕ ಅತ್ತವರ ಕಡೆಗೆ ಸಂಚರಿಸುವ ಎಲ್ಲಾ ಘನ ವಾಹನಗಳು ಕ್ಲಾಕ್ ಟವರ್ ಜಂಕ್ಷನ್ ಬಂದು ರೈಲ್ವೆ ನಿಲ್ದಾಣ ರಸ್ತೆಯ ಮೂಲಕ ಅತ್ತಾವರ ಕಡೆಗೆ ಸಂಚರಿಸುವುದು.
ಹಂಪನಕಟ್ಟೆ ಕಡೆಯಿಂದ ನೂರು ಮಸೀದಿ ರಸ್ತೆಯ ಮೂಲಕ ಅತ್ತಾವರ ಕಡೆಗೆ ಸಂಚರಿಸುವ ಎಲ್ಲಾ ಲಘುವಾಹನಗಳು ಫಳ್ನೀರು ರಸ್ತೆಯಲ್ಲಿ ಮುಂದುವರಿದು ಅವೇರಿ ಜಂಕ್ಷನ್ನಲ್ಲಿ ಬಲಕ್ಕೆ ತಿರುಗಿ ಸ್ಟರಕ್ ರಸ್ತೆಯ ಮೂಲಕ ಅತ್ತಾವರ ಕಡೆಗೆ ಸಂಚರಿಸುವುದು.
ಕೊಡಿಯಾಲ್ ಗುತ್ತು ಜೈಲು ರಸ್ತೆ ಕಾಮಗಾರಿ ನಡೆಯುವ ವೇಳೆ ಬಿಜೈ ಜಂಕ್ಷನ್ ಕಡೆಯಿಂದ ಬಂದು ಜೈಲು ಮೂಲಕ ಎಂ.ಜಿ ರಸ್ತೆಯನ್ನು ಪ್ರವೇಶಿಸುವ ಎಲ್ಲಾ ವಾಹನಗಳು ಬಿಜೈ ಜಂಕ್ಷನ್ ಕಡೆಯಿಂದ ನೇರವಾಗಿ ಕರಂಗಲ್ಪಾಡಿ ಜಂಕ್ಷನ್ ಕಡೆಗೆ ಚಲಿಸಿ ನಂತರ ಬಲಕ್ಕೆ ತಿರುಗಿ ಪಿ.ವಿ.ಎಸ್ ಜಂಕ್ಷನ್ ಮೂಲಕ ಎಂ.ಜಿ ರಸ್ತೆಯನ್ನು ಪ್ರವೇಶಿಸಿ ಮುಂದಕ್ಕೆ ಸಂಚರಿಸುವುದು.
ಕರಂಗಲ್ಪಾಡಿ ಕಡೆಯಿಂದ ಬಂದು ಜೈಲು ರಸ್ತೆಯ ಮೂಲಕ ಎಂ.ಜಿ ರಸ್ತೆಯನ್ನು ಪ್ರವೇಶಿಸುವ ಎಲ್ಲಾ ವಾಹನಗಳು ಕರಂಗಲ್ಪಾಡಿ ಜಂಕ್ಷನ್ನಲ್ಲಿ ನೇರವಾಗಿ ಪಿ.ವಿ.ಎಸ್ ಕಡೆಗೆ ಚಲಿಸಿ ಎಂ.ಜಿ ರಸ್ತೆಯನ್ನು ಪ್ರವೇಶಿಸಿ ಮುಂದಕ್ಕೆ ಸಂಚರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.