ಮಂಗಳೂರು,ಡಿ 24 (MSP): ನಗರದ ಸೈಂಟ್ ಆಗ್ನೇಸ್ ಕಾಲೇಜಿನ ಹೊರಾಂಗಣದಲ್ಲಿ ದಾಯ್ಜಿವರ್ಲ್ಡ್ 24/7 ಸುದ್ದಿವಾಹಿನಿ ಪ್ರಸ್ತುತಿ ಕೊಂಕಣಿ ಕಾರ್ಯಕ್ರಮ ರಿಯಾಲಿಟಿ ಶೋಗಳ ಅಂತಿಮ ಸ್ಪರ್ಧೆಯ ಸಮಾರೋಪ ‘ಸಂಭ್ರಮ್ ಅನ್ ಲಿಮಿಟೆಡ್’ ಅದ್ದೂರಿ ಕಾರ್ಯಕ್ರಮ ನಡೆಯಿತು.
ನೃತ್ಯ, ಸಂಗೀತ, ಪ್ರಹಸನ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ವೀಕ್ಷಕರಿಗೆ ಮುದ ನೀಡಿದವು. ವಿವಿಧ ಬಣ್ಣಗಳನ್ನು ಗಾಜಿನ ಹೂಜಿಗೆ ಸುರಿಯುವ ಮೂಲಕ ಉದ್ಘಾಟನೆ ನೆರವೇರಿತು. ಮಾಜಿ ಶಾಸಕ ಜೆ ಆರ್ ಲೋಬೋ ಮಾತನಾಡಿ, ದಾಯ್ಜಿವರ್ಲ್ಡ್ ವಾಹಿನಿ ಕೊಂಕಣಿ ಭಾಷೆಗೆ ನೀಡುತ್ತಿರುವ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕಲಾವಿದರನ್ನು ಬೆಳೆಸುವಲ್ಲಿ, ಕಲೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ಅಮೋಘವಾದ ಸೇವೆ ದಾಯ್ಜಿವಲ್ಡ್ ಸಲ್ಲಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮುಝೆ ತಾಳೋ ಗೈತಾಳೋ ಮತ್ತು ನಾಚ್ ನರ ನಾಚ್ ನಾರಿ ಹಾಗೂ ತಾರ ರಂ ಪಂ ನ ರಿಯಾಲಿಟಿ ಶೋನ ಸ್ಪರ್ಧಾ ವಿಜೇತರಿಂದ ಪ್ರದರ್ಶನ ಜೊತೆಗೆ ವಿಜೇತರ ಘೋಷಣೆ ನಡೆದು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ವೆಲಿಟಾ ಲೋಬೋ ಮುಝೆ ತಾಳೋ ಗೈತಳೋ ಸ್ಪರ್ಧೆಯ ಬಹುಮಾನ ಪಡೆದರೆ, ಗ್ಯಾವಿನ್ ಮೆನೇಜಸ್ ಪ್ರಥಮ, ಜೇಸನ್ ಲೋಬೋ ದ್ವಿತೀಯ ಬಹುಮಾನ ಪಡೆದರು, ನಾಚ್ ನರ ನಾಚ್ ನಾರೀ ಸ್ಪರ್ಧೆಯಲ್ಲಿ ಮರ್ವಿನ್ ಮತ್ತು ಶ್ವೇತಾ ವಿಜೇತರಾದರೆ, ಸಂದೇಶ ಮತ್ತು ಡೆಲಿನಾ ಪ್ರಥಮ ರನ್ನರ್, ರಾಹುಲ್ ಮತ್ತು ಡಯಾನ ದ್ವಿತೀಯ ರನ್ನಪ್ ಪ್ರಶಸ್ತಿ ಪಡೆದರು. ಇನ್ನು ತಾರಾರಂ ಪಂ ಸ್ಪರ್ಧೆಯಲ್ಲಿ ಪ್ಯಾಟ್ಸಿ ಮತ್ತು ನ್ಯಾನ್ಸಿ ದೇರೆಬೈಲ್ ಮತ್ತು ಲಿಯೋ ಮತ್ತು ಲಾವಿನಾ ರಾಣಿಪುರ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಪಡೆದರು. ದಾಯ್ಜಿವರ್ಲ್ಡ್ ಸುದ್ದಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ವಾಲ್ಟರ್ ನಂದಳಿಕೆ, ನಿರ್ದೇಶಕರಾದ ಆಲೆಕ್ಸಿಸ್ ಕ್ಯಾಸ್ಟೆಲಿನೋ, ಮೆಲ್ವಿನ್ ರಾಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.