ಉಳ್ಳಾಲ,ಡಿ 24 (MSP): ಸಮುದ್ರದಲ್ಲಿ ಮುಳುಗುತ್ತಿದ್ದ, ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬ ನಾಲ್ವರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ, ನಗರದ ಉಳ್ಳಾಲದ ಸೋಮೇಶ್ವರ ಸಮುದ್ರದಲ್ಲಿ ತೀರದಲ್ಲಿ ಡಿ.24 ರ ಸೋಮವಾರ ನಡೆದಿದೆ. ಆದರೆ ರಕ್ಷಣೆಗೊಳದಾವರ ಪೈಕಿ ಒಂದು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಇವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರವಾಸಿಗರಾದ ಬೆಂಗಳೂರು ಬನಶಂಕರಿ ನಿವಾಸಿ ಚಿಂತಾಮಣಿ ಕೇಟ್ಕರ್ (39) ಶೃದ್ದಾ ಕೇಟ್ಕರ್ (35) ಗಾರ್ಗಿ ಕೇಟ್ಕರ್ (7)ಮೈತ್ರೇಯಿ ಕೇಟ್ಕರ್ (4) ಇವರು ಸಮುದ್ರ ಅಲೆಯ ಹೊಡೆತಕ್ಕೆ ಸಿಲುಕಿ ಮುಳುಗುತ್ತಿರುವ ಸಂದರ್ಭ ಸ್ಥಳೀಯ ಲೈಫಗಾರ್ಡ್ ಸಿಬ್ಬಂದಿಗಳಿಂದ ರಕ್ಷಣೆ ಮಾಡಿದ್ದಾರೆ. ಇವರ ಪೈಕಿ ಮೈತ್ರೇಯಿ ಕೆತ್ಕಾರ್ (4) ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.