ಉಡುಪಿ, ಮಾ 30 (DaijiworldNews/HR): ಶಬರಿಮಲೆ ಪ್ರಕರಣವನ್ನು ಹಿಜಬ್ ಪ್ರಕರಣದ ಜೊತೆ ಹೋಲಿಸಬೇಡಿ. ದೇವಸ್ಥಾನದ ಧಾರ್ಮಿಕ ಆಚರಣೆಗೂ ಕಾಲೇಜಿನ ಸಮವಸ್ತ್ರಕ್ಕೂ ಹೋಲಿಕೆ ಸರಿಯಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಶಬರಿಮಲೆ ತೀರ್ಪು ವಿರುದ್ಧ ಕೇರಳದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ ಮಾಡಿದ್ದ ವಿಚಾರದ ಕುರಿತು ಮಾತನಾಡಿದ ಅವರು, ರಾಜ್ಯದ ಹೈಕೋರ್ಟ್ ತೀರ್ಪಿಗೆ ಶಬರಿಮಲೆ ತೀರ್ಪಿಗೂ ಹೋಲಿಕೆ ಸರಿಯಲ್ಲ. ಮಸೀದಿ, ಚರ್ಚ್, ದೇವಸ್ಥಾನದ ಆಚರಣೆಗೆ ವಿರುದ್ಧವಾಗಿ ತೀರ್ಪು ಬಂದರೆ ವಿರೋಧಿಸಬಹುದು. ಸಾರ್ವಜನಿಕ ಸಂಸ್ಥೆಯಲ್ಲಿ ನಿಯಮ ಪಾಲಿಸದಿರುವುದು ಸರಿಯಲ್ಲ ಎಂದರು.
ಒಬ್ಬ ಶಾಸಕನಾಗಿ ಯಾರಿಗೂ ಟೆಂಡರ್ ಕೊಡಲು ಸಾಧ್ಯವಿಲ್ಲ. ಪ್ರತಿಯೊಂದು ಕಾಮಗಾರಿಯ ಟೆಂಡರ್ ಆನ್ಲೈನಲ್ಲಿ ನಡೆಯುತ್ತದೆ. ಅರ್ಹತೆ ಇದ್ದವರಿಗೆ ಕಡಿಮೆ ಬಿಡ್ ಮಾಡಿದವರಿಗೆ ಟೆಂಡರ್ ಹೋಗುತ್ತದೆ. ನಾವು ಬಿಜೆಪಿ ಶಾಸಕರು ಮುಸ್ಲಿಂ ಧರ್ಮದ ವಿರೋಧಿಗಳಲ್ಲ. ಹಿಜಬ್ ಬ್ಯಾನ್ ಮಾಡಿ ಅಂತ ನಾವು ಎಲ್ಲೂ ಹೇಳಿಲ್ಲ ಎಂದರು.
ಇನ್ನು ದೇವಸ್ಥಾನ ಸುತ್ತ ಸರಕಾರದ ಕಾನೂನು ಪಾಲಿಸಿದ್ದನ್ನು ಬೆಂಬಲಿಸಿದ್ದೇವೆ. ಶಾಸಕರು ಸಾರ್ವಜನಿಕ ವ್ಯಕ್ತಿಗಳು- ನಮಗೆ ಆ ಧರ್ಮ ಈ ಧರ್ಮ ಇಲ್ಲ.ಎಲ್ಲರೂ ಸಮಾನವಾಗಿ ಇರುವುದಕ್ಕೆ ನನ್ನ ಬೆಂಬಲ. ಅತಿಯಾದ ಓಲೈಕೆ ಯಾವತ್ತಿಗೂ ಸರಿಯಲ್ಲ ಎಂದು ಯು.ಟಿ ಖಾದರ್ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ.