ಉಡುಪಿ, ಮಾ 31 (DaijiworldNews/MS): ಖಾಸಗಿಯಾಗಿ ನಿರ್ವಹಿಸುತ್ತಿದ್ದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರ್ಕಾರದ ವಶಕ್ಕೆ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದ ಹಿನ್ನಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ’ನಿಮ್ಮ ಜೊತೆ ನಾವಿದ್ದೇವೆ ’ ಎಂದು ಶಾಸಕ ರಘುಪತಿ ಭಟ್ ವಿಶ್ವಾಸ ತುಂಬಿದರು.
ಆಸ್ಪತ್ರೆಯ ಸಿಬ್ಬಂದಿಗಳು ಶಾಸಕ ರಘುಪತಿ ಭಟ್ ರನ್ನು ಅವರನ್ನು ಭೇಟಿ ಮಾಡಿದ ವೇಳೆ ಮಾತನಾಡಿದ ಅವರು, ಸದ್ಯ ಹಿಂದಿನಂತೆ ಗುತ್ತಿಗೆ ಆಧಾರದ ಮೇಲೆ ಎಲ್ಲಾ ಸಿಬ್ಬಂದಿಗಳ ಕೆಲಸ ಮುಂದುವರಿಯುತ್ತೆ.ಮಾತ್ರವಲ್ಲದೆ ಬಿ ಆರ್ ಶೆಟ್ಟಿ ಆಸ್ಪತ್ರೆಯ ಹೆಸರು ಹಾಗೆಯೇ ಇರುತ್ತೆ. ಸರಕಾರದ ಸುಪರ್ದಿಗೆ ತೆಗೆದುಕೊಳ್ಲುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಅದೇನೆ ಇದ್ದರೂ ಸರಕಾರ ಒಂದು ವ್ಯವಸ್ಥೆಯಡಿ ಕೆಲಸ ಮಾಡುತ್ತಿದೆ. ಹೀಗಾಗಿ ಸಿಬ್ಬಂದಿಗಳ ವಿಚಾರವಾಗಿ ಯಾವುದೇ ತಕ್ಷಣ ತೀರ್ಮಾನ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಯವರು ಹಿಂದೆ ಇರುವ ಸಿಬ್ಬಂದಿಗಳ ಮಾನವೀಯ ದೃಷ್ಟಿ ಇಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು . ಈಗಾಗಲೇ 30 ಲಕ್ಷ ಅನುದಾನ ಹಣ ಆಯುಷ್ಮಾನ್ ನಡಿಯಲ್ಲಿ ಬಂದಿದ್ದು ಡಿಸೆಂಬರ್ ವರೆಗೆ ಸಿಬ್ಬಂದಿಗಳ ಬಾಕಿ ವೇತನ ಕೊಡಲಾಗಿದೆ . ಅಲ್ಲದೆ ಸುಮಾರು ರೂ. 5 ಲಕ್ಷದಷ್ಟು ಲಾಂಡ್ರಿ, ಕ್ಯಾಂಟೀನ್ ಇತರ ಬಿಲ್ ಬಾಕಿ ಇದೆ. ಹೀಗಾಗಿ ಇನ್ನು ಮುಂದೆಯೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೆವೆ, ಆತಂಕ ಬೇಡ ಎಂದು ಸಿಬ್ಬಂದಿಗಳನ್ನು ಸಮಾಧಾನ ಪಡಿಸಿದರು.
ಮುಂದೆ ಆಸ್ಪತ್ರೆಗೆ ಗುತ್ತಿಗೆ ಆಧಾರದಲ್ಲಿ ಬಂದರೆ ಮೊದಲ ಆದ್ಯತೆ ನಿಮಗೆ ಕೊಡುತ್ತೇವೆ ಎಂದು ವಿಶ್ವಾಸ ತುಂಬಿದರು.