ಉಡುಪಿ, ಮಾ 31 (DaijiworldNews/MS): ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 134 ಅಧಿಕಾರಿಗಳು 2021 ರ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕಾರಕ್ಕೆ ಉಡುಪಿಯ ಇಬ್ಬರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.
ಆಯ್ಕೆ ಪಟ್ಟಿ ಮಾರ್ಚ್ 30 ರಂದು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಪೋಲಿಸ್ ಇಲಾಖೆಯಲ್ಲಿ ಡಿವೈಎಸ್ಪಿ ಡಿ ಎ ಆರ್ ಆಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಆರ್ ನಾಯಕ್ ಮತ್ತು ಅಪರಾಧ ಪತ್ತೆ ವಿಭಾಗದಲ್ಲಿ ಹಿರಿಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಜಯ್ ಕುಮಾರ್ ಮುಖ್ಯ ಮಂತ್ರಿ ಪದಕ ಪುರಸ್ಕಾರ ಕ್ಕೆ ಆಯ್ಕೆಯಾಗಿದ್ದಾರೆ.
2021 ರ ಮುಖ್ಯ ಮಂತ್ರಿ ಪದಕ ಪುರಸ್ಕಾರ ಪ್ರದಾನ ಸಮಾರಂಭವು ಎಪ್ರಿಲ್ 2ರಂದು, ಬೆಳಗ್ಗೆ8 ಗಂಟೆಗೆ ಬೆಂಗಳೂರಿನ ಮೂರನೇ ಪಡೆ ಕೆಎಸ್ ಆರ್ ಪಿ ಕೋರಮಂಗಲದಲ್ಲಿ ನಡೆಯಲಿದೆ.