ಕಾಸರಗೋಡು, ಮಾ. 30 (DaijiworldNews/SM): ಅತೀ ದೊಡ್ಡದೆನ್ನಲಾದ ಆಮೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಕಾಸರಗೋಡಿನ ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಗಿದೆ.
ಬಾವಿಕ್ಕರೆ ಸಮೀಪದ ಅಣೆಕಟ್ಟಿನ ಬದಿಯಲ್ಲಿ ಆಮೆ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆಮೆಯು ಒಂದು ಮೀಟರ್ ಉದ್ದ 62 ಸೆ. ಮೀ. ಅಗಲ ಹೊಂದಿದೆ.
ಈ ಹೆಣ್ಣು ಆಮೆ 40 ಕಿಲೋ ಭಾರ ಹೊಂದಿದೆ. ಹತ್ತು ವರ್ಷ ಪ್ರಾಯವನ್ನು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಸಿಹಿ ನೀರಿನಲ್ಲಿ ಈ ಆಮೆ ಕಂಡು ಬರುತ್ತಿದ್ದು, 2010ರಲ್ಲಿ ಕೋಜಿಕ್ಕೋಡ್ ಕುಟ್ಯಾಡಿ ಹೊಳೆಯಲ್ಲಿ ಇಂತಹ ಆಮೆ ಕಂಡು ಬಂದಿತ್ತು. ಇದಾದ ಬಳಿಕ ಪಯಸ್ವಿನಿ ಹೊಳೆಯಲ್ಲಿ ಈ ಅಪರೂಪದ ಆಮೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.