ಕಾಸರಗೋಡು, ಮಾ. 30 (DaijiworldNews/SM): ಕೇರಳದಲ್ಲಿ ಬಸ್ ಹಾಗೂ ಆಟೋ ರಿಕ್ಷಾ ಪ್ರಯಾಣ ದರ ಏರಿಕೆಗೆ ಸರಕಾರ ತೀರ್ಮಾನ ಕೈಗೊಂಡಿದೆ.
ಬಸ್ ಪ್ರಯಾಣ ದರ 8 ರೂಪಾಯಿಯಿಂದ 10 ರೂಪಾಯಿಗೆ ಏರಿಕೆಗೆ ನಿರ್ಧರಿಸಲಾಗಿದೆ. ಕಿಲೋ ಮೀಟರ್ ದರ 90 ಪೈಸೆ ಯಿಂದ ಒಂದು ರೂ. ಗೆ ಏರಿಕೆ ಮಾಡಲು ಸರಕಾರ ನಿರ್ಧಾರ ಕೈಗೊಂಡಿದೆ.
ಆಟೋ ರಿಕ್ಷಾ ಕನಿಷ್ಠ ಪ್ರಯಾಣ ದರ 25 ರೂ. ನಿಂದ 30 ರೂ. ಗೆ ಹೆಚ್ಚಳ ಮಾಡಲಾಗಿದೆ. ಕನಿಷ್ಠ ದರ ಒಂದೂವರೆ ಕಿ. ಮೀ. ನಿಂದ ಎರಡು ಕಿ.ಮೀ ಗೆ ಹೆಚ್ಚಳ ಆಗಿದೆ.