ಮಂಗಳೂರು, ಮಾ. 29 (DaijiworldNews/SM): ಬೆಳ್ತಂಗಡಿಯ ದಿನೇಶ್ ಕೊಲೆ ಖಂಡಿಸಿ ಎಸ್ಡಿಪಿಐ ಮಂಗಳೂರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.
ಕೊಲೆ ಮಾಡಿದ ವ್ಯಕ್ತಿ 15 ದಿನದಲ್ಲಿ ಜಾಮೀನು ಪಡೆದಿದ್ದಾರೆ. ಈ ನೆಲದಲ್ಲಿ ಕಾನೂನು ಇದೆನಾ? ಇದು ದುರಂತ. ಸಿಎಂ ಬೊಮ್ಮಾಯಿ ಅವರ ನಾಡಿನಲ್ಲಿ ಏನಿದು ತಾರತಮ್ಯ? ಹರ್ಷ ಮನೆಗೆ ಹೋಗಿ ಬಿಜೆಪಿಯವರು ಲಕ್ಷಗಟ್ಟಲೆ ಪರಿಹಾರ ನೀಡಿದ್ದಾರೆ. ಆದರೆ ದಲಿತ ದಿನೇಶ್ ಕನ್ಯಾಡಿ ಮನೆಗೆ ಬಿಜೆಪಿಯವರು ಬಂದಿಲ್ಲ ಯಾಕೆ? ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸಿದ್ದಾರೆ.