ಮಂಗಳೂರು, ಮಾ 29 (DaijiworldNews/DB): ನ್ಯಾಶನಲ್ ಕೆಡೆಟ್ ಕಾರ್ಪ್ಸ್ನ ಸಮಾಜ ಸೇವೆ ಮತ್ತು ಸಮುದಾಯ ಅಭಿವೃದ್ಧಿ ಚಟುವಟಿಕೆಯ ಭಾಗವಾಗಿ ನಂ.5 ಕರ್ನಾಟಕ ನೇವಲ್ ಯುನಿಟ್ ಮಂಗಳೂರಿನ ಕೆಡೆಟ್ಗಳು ಎಚ್ ಐವಿ ಪೀಡಿತ ಮಕ್ಕಳ ಮನೆ ನಗರದ ಅನಾಥಾಶ್ರಮ ಸಂವೇದನಾಗೆ ಸೋಮವಾರ ಭೇಟಿ ನೀಡಿದರು.
ನೌಕಾ ಘಟಕದ ಎನ್ಸಿಸಿಯ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕಮಾಂಡರ್ ಭರತ್ ಕುಮಾರ್, 4 ತರಬೇತುದಾರ ನೌಕಾ ನಾವಿಕರು, 7 ರಾಜ್ಯ ಸರ್ಕಾರಿ ಅಧಿಕಾರಿಗಳು, 26 ನೇವಲ್ ವಿಂಗ್ ಸೀನಿಯರ್ ಡಿವಿಷನ್ ಕೆಡೆಟ್ಗಳು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಸಂತ ಅಲೋಶಿಯಸ್ ಕಾಲೇಜಿನ ಎಎನ್ಒ ಸೆಕೆಂಡ್ ಆಫೀಸರ್ ಗುರುಮೂರ್ತಿ ಪಿ. ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಘಟಕದ ಸಿಬಂದಿ ಮತ್ತು ಎನ್ಸಿಸಿ ಕೆಡೆಟ್ಗಳು ಸಂಗ್ರಹಿಸಿದ ಬಟ್ಟೆಗಳೊಂದಿಗೆ ದಿನಸಿ ಮತ್ತು ಗೃಹೋಪಯೋಗಿ ಸಾಮಗ್ರಿಗಳನ್ನು ಅನಾಥಾಶ್ರಮಕ್ಕೆ ಹಸ್ತಾಂತರಿಸಲಾಯಿತು.
ಎನ್ ಸಿಸಿ ಕೆಡೆಟ್ಗಳು ಮಕ್ಕಳೊಂದಿಗೆ ಸಂವಾದ ನಡೆಸಿದರು. ಅವರ ಆಲೋಚನೆಗಳು, ಅನುಭವಗಳು ಮತ್ತು ಕಥೆಗಳನ್ನು ಹಂಚಿಕೊಂಡರು. ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಎನ್ ಸಿಸಿ ಕೆಡೆಟ್ಗಳಾಗಿ ದಾಖಲಾಗಲು ಮಕ್ಕಳನ್ನು ಪ್ರೇರೇಪಿಸಿದರು.