ಉಡುಪಿ, ಮಾ 29 (DaijiworldNews/HR): ಗುಂಡಿಬೈಲು ರಸ್ತೆಯ ಬದಿಯಲ್ಲಿ ಕಳೆದ ಒಂದುವರೆ ತಿಂಗಳಿಂದ ಯುಜಿಡಿ ಕೆಲಸ ಮಾಡುತ್ತಿದ್ದು, ಕಾಮಗಾರಿಗೆ ರಸ್ತೆ ಮೇಲೆ ಹಾಕಿದ ಮಣ್ಣು ರಾಶಿ ತೆರವು ಗೊಳಿಸಿಲ್ಲ. ಅಂಬಾಗಿಲು -ಗುಂಡಿಬೈಲು ರಸ್ತೆ ಸದಾ ವಾಹನ ಸಂಚಾರ ದಟ್ಟಣೆ ಇರುವ ಮುಖ್ಯ ರಸ್ತೆ. ಅಲ್ಲದೆ ಉಡುಪಿ ಸಿಟಿಗೆ ಪ್ರವೇಶ ಮಾಡಲು ಇರುವ ಮುಖ್ಯ ದ್ವಾರ.
ಉಡುಪಿ ನಗರದ ಕಲ್ಸಂಕ ಮೂಲಕ ಅಂಬಾಗಿಲಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯುನ್ನು ಕಳೆದ ಒಂದುವರೆ ತಿಂಗಳ ಹಿಂದೆ ಒಳಚರಂಡಿ ಕಾಮಗಾರಿಗಾಗಿ ಈ ರಸ್ತೆಯನ್ನು ಅಗೆಯಲಾಗಿತ್ತು, ಆದರೆ ಇದುವರೆಗೂ ಕಾಮಾಗಾರಿ ಮುಗಿಯುವ ಲಕ್ಷಣ ಕಾಣುತಿಲ್ಲ. ರಸ್ತೆ ಇಡೀ ಧೂಳುಮಯವಾಗಿದ್ದು, ಪಾದಚಾರಿಗಳಿಗೆ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಅಪಾಯಕಾರಿಯಾಗಿದೆ.
ಈ ಕಾಮಗಾರಿಗೆ ಒಂದು ಕಡೆ ರಸ್ತೆಯನ್ನು ಮುಚ್ಚಿ, ಇನ್ನೊಂದು ಬದಿಯಲ್ಲಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ರಸ್ತೆ ಕಿರಿದಾಗಿದ್ದು, ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ಬೆಳೆಗ್ಗೆ ಮತ್ತು ಸಂಜೆ ವೇಳೆಯಲ್ಲಿ ವಾಹನ ಚಾಲಕರು ಕಿರಿಕಿರಿ ಅನುಭವಿಸುವಂತಾಗಿದೆ.
ಈಗಾಗಲೇ ನಿಗದಿತ ಸಮಯಕ್ಕಿಂತ ವಿಳಂಬವೇ ಆಗುತ್ತಿರುವುದ್ರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಗರಸಭೆಯ ಸದಸ್ಯರನ್ನು ಕೇಳಿದರೆ ಇಂಜಿನಿಯರ್ ಕಾಮಗಾರಿಯನ್ನು ಮಾಡುತ್ತಿದ್ದಾರೆ ಎಂದು ಅಸಮಂಜಸ ಪ್ರತಿಕ್ರಿಯೆ ಬರುತ್ತಿದೆ.
ಇನ್ನು ಗುಂಡಿಬೈಲು ವಾರ್ಡಿನ ಸದಸ್ಯೆ ಗೀತಾ ಶೇಟ್ ದೈಜಿವರ್ಲ್ಡ್ ಗೆ ಪ್ರತಿಕ್ರಿಯಿಸಿ , "ಈ ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಕಾಮಗಾರಿ ಕೆಲವು ಕಾರಣದಿಂದ ಸ್ವಲ್ಪ ವಿಳಂಬ ಆಗಿದೆ. ೨೦೦೭ ರಲ್ಲಿ ಮಾಡಿದ ಹಳೆಯ ಕಾಮಗಾರಿಯನ್ನು ತೆಗೆಯಲು ಸ್ವಲ್ಪ ಸಮಯ ಬೇಕಾಗಿತ್ತು. ಇತ್ತೀಚಿಗೆ ಕಾಮಗಾರಿ ವೇಗ್ ಪಡೆದುಕೊಂಡಿದೆ. ಇಂಜಿನಿಯರ್ ಅಧಿಕಾರಿ ಸರಿಯಾಗಿ ಪ್ರತಿಕ್ರಿಯೆ ಮಾಡುವುದಿಲ್ಲ. ಜನರು ಕೂಡ ತಾಳ್ಮೆಯಿಂದ ಸಹಕಾರ ನೀಡಬೇಕು. ಮಳೆಯ ಒಳಗಾಗಿ ಆ ಕಾಮಗಾರಿಯನ್ನು ಮುಗಿಸಬೇಕೆಂದು ಇಂಜಿನಿಯಯರ್ ಗೆ ನಗರಸಭೆ ಸೂಚನೆ ನೀಡಿದೆ, ಎಂದು ಹೇಳಿದರು,