ಬೈಂದೂರು, ಮಾ 29 (DaijiworldNews/HR): ನಮ್ಮ ದೇವರನ್ನು ಅವಹೇಳನ ಮಾಡಿರುವ, ಸಮಾಜ ನಾಶ ಮಾಡಬೇಕೆಂದು ಹೊರಟಂತಹ ಒಬ್ಬ ವ್ಯೆಕ್ತಿಯ ಹೆಸರಿನಲ್ಲಿ ಕೊಲ್ಲೂರು ದೇವಳದಲ್ಲಿ ಪೂಜೆ(ಸಲಾಂ ಹೆಸರಲ್ಲಿ) ಮಾಡುವುದು ದೇವರಿಗೆ ಮಾಡುವ ಅಪಮಾನ. ಇದನ್ನ ಎಷ್ಟು ಬೇಗ ತೆಗೆದು ಹಾಕ್ತಾರೋ ಅಷ್ಟು ಶ್ರೇಯಸ್ಸು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಮಾಜ ನಾಶ ಮಾಡಬೇಕೆಂದು ಹೊರಟಂತಹ ಒಬ್ಬ ವ್ಯೆಕ್ತಿಯ ಹೆಸರಿನಲ್ಲಿ ಕೊಲ್ಲೂರು ದೇವಳದಲ್ಲಿ ಪೂಜೆ ಮಾಡುವುದರಿಂದ ದೇವರ ಶಕ್ತಿಯೇ ಕಡಿಮೆಯಾಗುತ್ತೆ ಅಂತ ನನಗೆ ಅನಿಸುತ್ತದೆ. ಆ ರೀತಿ ನಾವು ಮಾಡಬಾರದು ಗೊತ್ತಿಲ್ಲದೆ ಆಗಿ ಹೋಗಿದೆ ಆದ್ರೇ ಶೀಘ್ರದಲ್ಲಿ ದೇವರ ಹೆಸರಿನಲ್ಲಿ ಇನ್ನೊಂದು ಪೂಜೆ ಮಾಡಿ. ಸಲಾಂ ಇನ್ನೂ ಸ್ವಲ್ಪ ಹೊತ್ತಿನಲ್ಲಿ ಅಲ್ಲಾ ಹು ಸಲಾಂ ಎಲ್ಲಾ ಬರುವ ಸಾಧ್ಯತೆಯಿದೆ. ನಮ್ಮ ದೇವಸ್ಥಾನದಲ್ಲಿ ನಮ್ಮ ತನದ್ದೆ ಇರಬೇಕು. ನಮ್ಮ ಮಕ್ಕಳಿಗೆ ನಮ್ಮ ಭಾವನೆ ಬೆಳೆಯಬೇಕು ಎಂದರು.
ನಾವು ಇಷ್ಟು ದಿವಸ ಉದಾರಿಗಳಾಗಿದ್ದೇವೆ. ಉದಾರಿ ಉದಾರ ಮನೋಭಾವನೆ ಅವರಿಗೆ ಅರ್ಥವಾಗಿಲ್ಲ. 2002ರಲ್ಲಿ ಎಸ್.ಎಂ ಕೃಷ್ಣ ನೇತ್ರತ್ವದ ಕಾಂಗ್ರೇಸ್ ಸರಕಾರವೆ 100 ಮೀ ನೂಳಗೆ ಯಾವ ಮುಸಲ್ಮಾನ್ ಅಂಗಡಿ ಇಡಬಾರದು ಎಂಬ ಕಾನೂನನ್ನು ಜಾರಿಗೆ ತಂದಿದ್ದರು. ಯಾಕೆಂದ್ರೇ ಆಗ ಅವರಿಗೆ ಅನ್ಯಾಯ ಮುಸ್ಲಿಂಮರು ಅನ್ಯಾಯ ಮಾಡ್ತಾರೆ ಅಂತ ಗೊತ್ತಿರಬೇಕು. ಆದರೆ ಸಿದ್ದರಾಮಯ್ಯನಿಗೆ ಗೊತ್ತಾಗಿಲ್ಲ ಡಿ.ಕೆ ಶಿವಕುಮಾರ್ ಗೆ ಗೊತ್ತಾಗಿಲ್ಲ ಎಂದಿದ್ದಾರೆ.
ಇನ್ನು ನಮ್ಮನ್ನ ಮುಟ್ಟಲಿಕ್ಕೆ ಕೂಡದು ನಮ್ಮ ದೇವಸ್ಥಾನಕ್ಕೆ ಬರಲಿಕ್ಕೆ ಕೂಡದು. ನಿಮ್ಮ ಮಸೀದಿಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ ನಮ್ಮಿಂದ ಆಕ್ಷೇಪವಿಲ್ಲ. ಅಲ್ಲಿ ಏನೂ ಬೇಕಾಂದ್ರೇ ಮಾರಿ ನೀವು ನಮ್ಮಿಂದ ಆಕ್ಷೇಪವಿಲ್ಲ. ಇದು ನಿರಂತರವಾಗಿ ನೆಡೆಯಬೇಕೆಂದು ನಾನು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.