ಬಂಟ್ವಾಳ, ಮಾ. 28 (DaijiworldNews/SM): ತಾಲೂಕಿನ 17 ಪರೀಕ್ಷಾ ಕೇಂದ್ರಗಳಲ್ಲಿ ಎಸ್ ಎಸ್ ಎಲ್ಸಿ ಪರೀಕ್ಷೆ ಸುಗಮವಾಗಿ ನಡೆದಿದ್ದು, 29 ವಿದ್ಯಾರ್ಥಿಗಳು , ಹಾಗೂ ಮರು ಪರೀಕ್ಷೆ ಬರೆಯಬೇಕಿದ್ದ 4 ಪರೀಕ್ಷಾರ್ಥಿಗಳು ಸಹಿತ 33ಮಂದಿ ಗೈರು ಹಾಜರಾಗಿದ್ದಾರೆ.
ಒಟ್ಟು 5598 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, ಈ ಪೈಕಿ 5565 ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ. ತಹಶೀಲ್ದಾರ್, ಬಿಇಓ ಹಾಗೂ ಡಯಟ್ ನಿಂದ ಆಗಮಿಸಿದ್ದ ನೋಡಲ್ ತಂಡಗಳು ಪರೀಕ್ಷಾ ಕೇಂದ್ರಗಳ ಮೇಲುಸ್ತುವಾರಿ ನಡೆಸಿದವು. ಯಾವುದೇ ಗೊಂದಲಗಳಿಲ್ಲದೆ ಎಲ್ಲವೂ ಸುಗಮವಾಗಿ ನಡೆದಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.