ಉಡುಪಿ, ಮಾ. 28 (DaijiworldNews/SM): ಸದನದಲ್ಲಿ ಶಾಸಕ ರಘುಪತಿ ಭಟ್ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ ಎಂದು ಎಸ್ ಡಿಪಿಐ ಅಧ್ಯಕ್ಷ ಮಜೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ತೀರ್ಪು ಹಿನ್ನೆಲೆ ಶಾಂತಿಯುತ ಬಂದ್ ಆಚರಿಸಿದ್ದಾರೆ. ಬಲವಂತವಾಗಿ ಹಿಂದೂ ಅಂಗಡಿ ಮುಚ್ಚಿಸಿದ್ದಾರೆ ಎಂದು ಭಟ್ ಹೇಳಿದ್ದಾರೆ. ಇದು ಅಕ್ಷಮ್ಯ, ರಘುಪತಿ ಭಟ್ ವಿರುದ್ದ ಕ್ರಮ ಕೈಗೊಳ್ಳಿ ಎಂದು ಅವರು ಆಗ್ರಹಿಸಿದ್ದಾರೆ.
ಇಡೀ ರಾಜ್ಯದಲ್ಲಿ ಬಲವಂತವಾಗಿ ಬಂದ್ ಮಾಡಿರುವ ಬಗ್ಗೆ ಒಂದೇ ಒಂದು ಪ್ರಕರಣ ಇಲ್ಲ. ನಿಮಗೆ ಸವಾಲು ಹಾಕುತ್ತೇವೆ. ಅಂತಹ ಯಾವುದಾದರೂ ಪ್ರಕರಣಗಳಿದ್ದರೆ, ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ್ದಾರೆ.
ನಿಮ್ಮದೇ ಕ್ಷೇತ್ರದ ಜಾಮಿಯಾ ಮಸೀದಿ ಕಟ್ಟಡದಲ್ಲಿ ಹಿಂದೂಗಳು ವ್ಯಾಪಾರ ಮಾಡಿದ್ದಾರೆ. ಅವರನ್ನು ಯಾರೂ ಬಂದ್ ಮಾಡಿಸಿಲ್ಲ. ಹಲವು ಮುಸಲ್ಮಾನರನ್ನು ಕೂಡಾ ಬಂದ್ ಮಾಡಿಲ್ಲ. ಸದನದಲ್ಲಿ ಕ್ಷಮೆ ಯಾಚಿಸಿ ಇಲ್ಲವಾದರೆ ಸಾಬೀತು ಮಾಡಿ ಎಂದು ಎಸ್ ಡಿ ಪಿ ಐ ರಾಜ್ಯ ಅಧ್ಯಕ್ಷ ಮಜೀದ್ ಆಗ್ರಹಿಸಿದ್ದಾರೆ.