ಉಡುಪಿ, ಡಿ 23 (MSP) :ಉಡುಪಿ ಜಿಲ್ಲೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಡಿಸೆಂಬರ್ 27 ರಂದು ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 4 ರ ವರೆಗೆ ಈ ಕೆಳಗೆ ನಮೂದಿಸಿದ ಸ್ಥಳಗಳಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿರುತ್ತಾರೆ.
ಮಲ್ಪೆ, ಕಲ್ಮಾಡಿ ಕಡೆಯಿಂದ ಬರುವ ವಾಹನಗಳನ್ನು ಕಲ್ಮಾಡಿ ಜಂಕ್ಷನ್ನಿಂದ ಕಿದಿಯೂರು ಜಂಕ್ಷನ್ ಮಾರ್ಗವಾಗಿ ಅಂಬಲಪಾಡಿ ಸ್ವಾಗತ ಗೋಪುರ –ಜೋಡುಕಟ್ಟೆ ಮಾರ್ಗವಾಗಿ ಉಡುಪಿ ನಗರಕ್ಕೆ ಬರುವುದು.
ಕುಂದಾಪುರ, ಬ್ರಹ್ಮಾವರ, ಸಂತೆಕಟ್ಟೆ ಕಡೆಯಿಂದ ಉಡುಪಿಗೆ ಬರುವ ವಾಹನಗಳು ಅಂಬಾಗಿಲಿನಿಂದ ಬಂದು ರಸಿಕ ಬಾರ್ ಜಂಕ್ಷನ್ ಮುಖೇನ ದೊಡ್ಡಣಗುಡ್ಡೆ, ಮನೋಜಿಗುಜ್ಜಿ, ಲಾ-ಕಾಲೇಜ್ ಜಂಕ್ಷನ್ ,ಎಸ್.ಎಂ.ಕೆ ಜಂಕ್ಷನ್, ಬೀಡನಗುಡ್ಡೆ ಮಾರ್ಗವಾಗಿ ನಗರಕ್ಕೆ ಬರುವುದು. ಕಾರ್ಕಳ, ಹಿರಿಯಡ್ಕ, ಮಣಿಪಾಲ ಕಡೆಯಿಂದ ಬರುವ ವಾಹನಗಳು ಎಸ್ಕೆಎಂ ಜಂಕ್ಷನ್, ಬೀಡನಗುಡ್ಡೆ ಎಸ್ಎಂಕೆ ಜಂಕ್ಷನ್, ಬೀಡನಗುಡ್ಡೆ , ಮಿಷನ್ ಕಂಪೌಂಡ್ ಮಾರ್ಗವಾಗಿ ನಗರಕ್ಕೆ ಬರುವುದು.
ನಗರದಿಂದ ಮಲ್ಪೆ ಕಡೆಗೆ ಹೋಗುವ ವಾಹನಗಳು ಜೋಡುಕಟ್ಟೆ, ಕಿನ್ನಿಮುಲ್ಕಿ, ಅಂಬಲಪಾಡಿ-ಕಿದಿಯೂರು ಕಲ್ಮಾಡಿ ಮಾರ್ಗವಾಗಿ ಮಲ್ಪೆಗೆ ಬರುವುದು.
ಡಿ.26 ರಿಂದ ಅಂಗಡಿ ಮುಂಗಟ್ಟು ಮುಚ್ಚುವ ಬಗ್ಗೆ
ಇದಲ್ಲದೆ ಡಿಸೆಂಬರ್ 27 ರಂದು ರಾಷ್ಟ್ರಪತಿಗಳು ಆಗಮಿಸಿ, ಸರ್ಕ್ಯೂಟ್ ಹೌಸ್ ತಂಗಿ, ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವುದರಿಂದ, ಭಧ್ರತಾ ದೃಷ್ಟಿಯಿಂದ, ಉಡುಪಿಯ ಸಂಸ್ಕೃತ ಕಾಲೇಜು ಪಕ್ಕದ ಗೇಟಿನಿಂದ ಸಂಪೂರ್ಣ ರಥಬೀದಿಯ ಸುತ್ತ ಹಾಗೂ ರಾಜಾಂಗಣದ ಸುತ್ತಮುತ್ತ ಇರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಡಿ.26 ರ ಮಧ್ಯಾಹ್ನ 12 ಗಂಟೆಯಿಂದ 27 ರ ಮಧ್ಯಾಹ್ನ 3 ಗಂಟೆಯವರೆಗೆ ಮುಚ್ಚುವಂತೆ ಹಾಗೂ ೨೭ ರಂದು ಸಾರ್ವಜನಿಕರಿಗೆ ದಿನದಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಶ್ರೀ ಕೃಷ್ಣ ಮಠ ಭೇಟಿ ನಿರ್ಬಂಧಿಸಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿರುತ್ತಾರೆ.