ಉಡುಪಿ,ಡಿ 23 (MSP): ಮಲ್ಪೆ ಸಮುದ್ರ ತೀರದಲ್ಲಿ ಡಿಸೆಂಬರ್ 31 ರಂದು ಬೀಚ್ ಗಾಳಿಪಟ ಉತ್ಸವ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಶನಿವಾರ, ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಬೀಚ್ ಗಾಳಿಪಟ ಉತ್ಸವ ಏರ್ಪಡಿಸುವ ಕುರಿತು ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ , ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ ವತಿಯಿಂದ ಮಲ್ಪೆ ಬೀಚ್ನಲ್ಲಿ ಡಿಸೆಂಬರ್ 31 ರಂದು ನಡೆಯುವ ಬೀಚ್ ಗಾಳಿಪಟ ಉತ್ಸವದಲ್ಲಿ ಸುಮಾರು 40 ಮಂದಿ ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೆ ಅತ್ಯಾಕರ್ಷಕ ಮಾದರಿಯ ಗಾಳಿಪಟಗಳನ್ನು ಹಾರಿಸಲಿದ್ದು, ಸಂಜೆ 6 ರಿಂದ 8 ಗಂಟೆಯವರೆಗೆ ಎಲ್.ಇ.ಡಿ ಬಲೂನ್ ಹಾರಾಟ ನಡೆಯಲಿದೆ, ಆಸಕ್ತರಿಗೆ ವಿವಿಧ ರೀತಿಯ ಗಾಳಿಪಟ ತಯಾರಿಸುವ ಕುರಿತಂತೆ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಸಹ ನಡೆಯಲಿದೆ, ಸಂಜೆ 6.30 ರಿಂದ ಪಂಚ ವಾದ್ಯ, ಕೋರಗ ಡೋಲು, ಹುಲಿ ವೇಷ ಬ್ಯಾಂಡ್, ನಾಸಿಕ್ ಬ್ಯಾಂಡ್, ನಗಾರಿ ಬ್ಯಾಂಡ್ ಮತ್ತು ವಲ್ರ್ಡ್ ಮ್ಯೂಸಿಕ್ ಬ್ಯಾಂಡ್ ಸೇರಿದಂತೆ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 12 ಗಂಟೆಗೆ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ, ಬೀಚ್ ಗಾಳಿಪಟ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ವಿವಿಧ ಅಧಿಕಾರಿಗಳನ್ನೊಂಡ ಸಮಿತಿಯನ್ನು ಜಿಲ್ಲಾಧಿಕಾರಿ ರಚಿಸಿದರು. ಸಭೆಯಲ್ಲಿ ನಗರಸಭೆ ಆಯುಕ್ತ ಆನಂದ್ ಕಲ್ಲೋಳಿಕರ್, ಮಲ್ಪೆ ಬೀಚ್ ಅಭಿವೃದ್ದಿಯ ಸುದೇಶ್ ಶೆಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.