ಕುಂದಾಪುರ, ಮಾ 27 (DaijiworldNews/HR): ನಗರದ ವಿನಾಯಕ ಥಿಯೇಟರ್ ಬಳಿಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಾಲ್ವರು ಅಪರಿಚಿತರು ಆರ್ಟಿಐ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ದಾಳಿಯಲ್ಲಿ ಕುಂದೇಶ್ವರ ರಸ್ತೆ ನಿವಾಸಿ ಸದಾಶಿವ ಕೋಟೆಗಾರ್ (56) ಗಾಯಗೊಂಡಿರುವ ವ್ಯಕ್ತಿ.
ಶುಕ್ರವಾರ ರಾತ್ರಿ 7.45ರ ಸುಮಾರಿಗೆ ವಿನಾಯಕ ಫಿಲಂ ಟಾಕೀಸ್ ಬಳಿಯ ಲೇನ್ ನಲ್ಲಿ ನಿಂತಿದ್ದ ಸದಾಶಿವ ಕೋಟೆಗಾರ್ ಮೇಲೆ ನಾಲ್ವರು ಅಪರಿಚಿತರು ಕತ್ತಿ, ಮರದ ದಿಮ್ಮಿ, ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದು, ಗಾಯಗೊಂಡ ಸದಾಶಿವ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಆರ್ಟಿಐ ಕಾರ್ಯಕರ್ತರ ಸಂಘದವರು ಆಸ್ಪತ್ರೆಗೆ ಭೇಟಿ ನೀಡಿ ಸದಾಶಿವ ಅವರ ಆರೋಗ್ಯ ವಿಚಾರಿಸಿದ್ದು, ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಆರ್ ಟಿಐ ಅಧ್ಯಕ್ಷ ಸದಾಶಿವ ಶೆಟ್ಟಿ, ಸಂಚಾಲಕ ಸತೀಶ್ ಪೂಜಾರಿ, ಮಹೇಶ್ ಉಡುಪ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.