ಉಡುಪಿ, ಮಾ 27 (DaijiworldNews/HR): ಕವಿತಾ ಟ್ರಸ್ಟ್ ಮಂಗಳೂರು ಆಯೋಜಿಸಿದ್ದ ಹಾಲೆಕೊಡಿ ಕವಿತಾ ಸಂಜೆ ಶನಿವಾರದಂದು ಬಾರ್ಕೂರಿನ ಆಲ್ವಿನ್ ಡಿ ಅಲ್ಮೇಡಾ ರವರ ತೋಟದಲ್ಲಿ ನಡೆಯಿತು. ಸಂತ ಪೀಟರ್ ಚರ್ಚ್ ಬಾರ್ಕೂರಿನ ಪ್ರಧಾನ ಧರ್ಮಗುರುಗಳಾದ ಫಾದರ್ ಫಿಲಿಪ್ ನೆರಿ ಅರಾನ್ಹ ಕವಿಗೋಷ್ಟಿಯನ್ನು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕವಿತಾ ಟ್ರಸ್ಟ್ ನ ಸ್ಥಾ ಪಕ ಟ್ರಸ್ಟಿಗಳಲ್ಲಿ ಓರ್ವರಾದ ಮೆಲ್ವಿನ್ ರೊಡ್ರಿಗಸ್ ಮಾತನಾಡಿ "ಕವಿತಾ ಟ್ರಸ್ಟ್ ಮತ್ತು ಬಾರ್ಕೂರಿನ ಮಣ್ಣಿಗೆ ಅವಿನಾಭಾವ ಸಂಭಂದ ಇದ್ದು, ಬಾರ್ಕೂರಿನಿಂದ ಹಲವಾರು ಮಂದಿ ಕವಿ, ಲೇಖಕ, ಸಾಹಿತ್ಯಕಾರರು ಹೊರಹೊಮ್ಮಿದ್ದಾರೆ. ಈ ಮೊದಲು ಕೂಡಾ ಬಾರ್ಕೂರಿನಲ್ಲಿ ಕವಿಗೋಷ್ಟಿಗಳನ್ನು ಕವಿತಾ ಟ್ರಸ್ಟ್ ಆಯೋಜಿಸಿತ್ತು ಎಂದು ನೆನಪಿಸಿಕೊಂಡರು.
ಎರಿಕ್ ಸೋನ್ಸ್ ಬಾರ್ಕೂರು ಕವಿಗೋಷ್ಟಿಯ ಅಧ್ಯಕ್ಷ್ಯತೆಯನ್ನು ವಹಿಸಿದ್ದರು. ಸುಜಾತಾ ಅಂದ್ರಾದೆ ಸಾಸ್ತಾನ, ಡಾಕ್ಟರ್ ಫ್ಲಾವಿಯಾ ಕ್ಯಾಸ್ತಲಿನೋ ಮಣಿಪಾಲ್, ಆಂಟನಿ ಲುವಿಸ್ ಮಣಿಪಾಲ್, ಪಿಯುಸ್ ಜೇಮ್ಸ್ ಕರುಳ್ ಗಳ್ನಡೆ, ಹೆನ್ರಿ ಲುವಿಸ್ ಬ್ರಹ್ಮಾವರ, ಆಲಿಸ್ ಡಿಸೊಜಾ ಬಾರ್ಕೂರು, ಜೀತಾ ಗೊನ್ಸಾಲ್ವಿಸ್ ಬಾರ್ಕೂರು ಮತ್ತು ಆರ್ಚಿಬಾಲ್ಡ್ ಫುರ್ಟಾಡೋ ಕಲ್ಯಾಣಪುರ ಈ ಸಂಧರ್ಭದಲ್ಲಿ ತಮ್ಮ ಕವನಗಳನ್ನು ವಾಚಿಸಿದರು.
ಇದೇ ಸಂಧರ್ಭದಲ್ಲಿ ಆಲ್ವಿನ್ ಅಂದ್ರಾದೆ ಪಿಯುಸ್ ಜೇಮ್ಸ್ ಕರುಳ್ ಗಳ್ನಡೆ ಇವರೊಂದಿಗೆ ಕವಿ ಮತ್ತು ಜೀವನ ಈ ಕುರಿತಾಗಿ ಸಂವಾದವನ್ನು ನಡೆಸಿದರು.
ಯುಜಿನ್ ಕ್ವಾಡ್ರಸ್, ನೊರಿನ್ ಲೋಬೋ ಮತ್ತು ವಿವೆಟ್ ಲುವಿಸ್ ಈ ಸಂಧರ್ಭದಲ್ಲಿ ಶಿಶು ಗಿತೆಗಳನ್ನು ಪ್ರಸ್ತುತಪಡಿಸಿದರು.